ವಿಜಯಪುರ: ಮುರುಘಾ ಶರಣರ ವಿರುದ್ಧ ಎಫ್ಐಆರ್ ಆಗಲ್ಲ. ಎಫ್ಐಆರ್ ಆದ್ರೇ ನೋಡೋಣ ಎಂಬುದಾಗಿ ಸಚಿವ ಉಮೇಶ್ ಕತ್ತಿ ( Minister Umesh Katti ) ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ಮಠದ ಒಳ ಜಗಳವಾಗಿದೆ. ಈಗ ಈ ಜಗಳ ಎಲ್ಲೆಲ್ಲೋ ಹೋಗುತ್ತಿದೆ ಅಷ್ಟೇ ಎಂದರು.
ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್: ಬಿಎಸ್ ವೈ ಭೇಟಿಯಾಗಿ ಸಿಎಂ ಬೊಮ್ಮಾಯಿ ಚರ್ಚೆ.?
ಮಾಜಿ ಶಾಸಕ ಎಸ್ ಕೆ ಬಸವರಾಜನ್ ಹಾಗೂ ಸ್ವಾಮೀಜಿಗಳ ಜಗಳದಿಂದ ಹೀಗೆ ಆಗಿದೆ. ಕೋರ್ಟ್ ಏನ್ ತೀರ್ಮಾನ ಕೈಗೊಳ್ಳುತ್ತೋ ನೋಡೋಣ. ಸ್ವಾಮೀಜಿಗಳ ಮೇಲೆ ಆರೋಪ ಮಾಡಿರುವುದು ತಪ್ಪು ಎಂದರು.
ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಅವರು ಸಮಾಜವನ್ನು ತಿದ್ದುವಂತ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳಿಗೆ ತೊಂದರೆ ನೀಡಬಾರದು ಎಂದು ಹೇಳಿದರು.
ಏಷ್ಯಾಕಪ್ನಲ್ಲಿ ಪಾಕ್ ವಿರುದ್ಧ ʻಭಾರತʼ ದಿಗ್ವಿಜಯ… ದೇಶಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ… ಇಲ್ಲಿದೆ ವಿಡಿಯೋ
ಅಂದಹಾಗೇ ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಮೈಸೂರಿನ ನಜರಾಬಾದ್ ಠಾಣೆಯಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬಳಿಕ ತನಿಖೆ ಆರಂಭಿಸಿದ್ದಂತ ಪೊಲೀಸರು ನಿನ್ನೆ ಬಾಲಕಿಯರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೇ ವೈದ್ಯಕೀಯ ಪರೀಕ್ಷೆಗೂ ಹಾಜರುಪಡಿಸಿದ್ದರು.
BIG NEWS: ದೇಶಾದ್ಯಂತ ಕೋವಿಡ್ ಕೇಸ್ ಹೆಚ್ಚಳ: ಇಂದು 7,591 ಮಂದಿಗೆ ಕೊರೋನಾ ಪಾಸಿಟಿವ್ | India Covid19 Report