ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯ ( Chief Minister Office ) ಬಹುಮುಖ್ಯ ಕಡತವೇ ನಾಪತ್ತೆಯಾಗಿದೆ. ಅದು ಚುನಾವಣೆಗೆ ಸಂಬಂಧಿಸಿದಂತದ್ದು ಎಂದು ಹೇಳಲಾಗುತ್ತಿತ್ತು. ಆದ್ರೇ ಅಂತಹ ಯಾವುದೇ ಕಡತ ನಾಪತ್ತೆಯಾಗಿಲ್ಲ ಎಂಬುದಾಗಿ ಬಿಬಿಎಂಪಿ ಆಜಳಿತಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸಂವಿಧಾನದ ಪ್ರತಿ ಹಂಚಿಕೆ – ಸಿಎಂ ಬೊಮ್ಮಾಯಿ
ಈ ಕುರಿತಂತೆ ಬಿಬಿಎಂಪಿಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ( Rakesh Singh IAS ) ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಾಹೀರಾತು ನೀತಿಯ ಬಗ್ಗೆ ಕೆಲವು ಸ್ಪಷ್ಟೀಕರಣವನ್ನು ಕೋರಿ ಯುಡಿಡಿ/439/ಎಂಎನ್ಯು/2018 ಭಾಗ (2) ಅನ್ನು ಸಲ್ಲಿಸಲಾಗಿದೆ. ಅದನ್ನು ಈಗ ಸ್ವೀಕರಿಸಲಾಗಿದೆ. ಈ ಕಡತವು ಮತದಾರರ ಪಟ್ಟಿಯ ವಿಷಯಗಳು ಅಥವಾ ಇತರ ಯಾವುದೇ ವಿಷಯಗಳಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದೆ.
File no UDD/439/MNU/2018 part ( 2) seeking some clarification on advertisement policy was submitted and the same has now been received. This file is not related to electoral roll issues or any other issues . All files (main file, part 1, part 3 and part 4) Pertaining 1/2
— Rakesh Singh IAS (@BBMPAdmn) November 26, 2022
ಜಾಹೀರಾತು ನೀತಿಗೆ ಸಂಬಂಧಿಸಿದ ಎಲ್ಲಾ ಕಡತಗಳು (ಮುಖ್ಯ ಕಡತ, ಭಾಗ 1, ಭಾಗ 3 ಮತ್ತು ಭಾಗ 4) ನಗರಾಭಿವೃದ್ಧಿಗೆ ಸಂಬಂಧಿಸಿವೆ. ಯಾವುದೇ ಸಚಿವರ ಕಚೇರಿ ಅಥವಾ ಸಿಎಂ ಕಚೇರಿಯಲ್ಲಿ ಜಾಹೀರಾತು ನೀತಿ ಅಥವಾ ಇತರ ಯಾವುದೇ ನೀತಿಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಾಣೆಯಾಗಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
to advertisement Policy are with the Urban Development. No any other files are missing or misplaced with respect to advertisement policy or any other policy, in any minister’s office or CM’s office. 2/2
— Rakesh Singh IAS (@BBMPAdmn) November 26, 2022