ದೆಹಲಿ : ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ 30 ವರ್ಷದ ಮಹಿಳೆಯೊಬ್ಬರು ತಮ್ಮ ಮಗುವಿಗೆ ಜನ್ಮ ನೀಡಬೇಕಾದ ʻಹೃದಯ ವಿದ್ರಾವಕʼ ಈ ಘಟನೆಯ ವೀಡಿಯೊ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಎಚ್ಚರ..! ʻವಿಶ್ವದಲ್ಲೇ 3 ವೈರಸ್ ʼಗಳು, ಕರೋನಾ ವೈರಸ್ಗಿಂತ ಹೆಚ್ಚು ಅಪಾಯಕಾರಿ: ʼ ಶಾಕಿಂಗ್ ʼನೀಡಿದ ತಜ್ಞರು
ಈ ಸಂದರ್ಬದಲ್ಲಿ ಕೆಲವು ದಾದಿಯರು ಸೇರಿದಂತೆ ಮಹಿಳೆಯರು ಗರ್ಭಿಣಿ ಮಹಿಳೆಯ ಹೆರಿಗೆಯ ಸಮಯದಲ್ಲಿ ಸುತ್ತಲೂ ಸೀರೆಯೊಂದಿಗೆ ನಿಂತ್ತಿರುವುದನ್ನು ತೋರಿಸಲಾಗಿದೆ. ಆಸ್ಪತ್ರೆಯು ಸೋಮವಾರ ಅವಳನ್ನು ದಾಖಲಿಸಿಕೊಂಡಿಲ್ಲ ಮತ್ತು ಅವಳು ರಾತ್ರಿಯನ್ನು ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ ಕಳೆದಳು ಈ ವಿಚಾರಕ್ಕೆ ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್ಚರ..! ʻವಿಶ್ವದಲ್ಲೇ 3 ವೈರಸ್ ʼಗಳು, ಕರೋನಾ ವೈರಸ್ಗಿಂತ ಹೆಚ್ಚು ಅಪಾಯಕಾರಿ: ʼ ಶಾಕಿಂಗ್ ʼನೀಡಿದ ತಜ್ಞರು
“ಆರೋಪಗಳ ಪ್ರಕಾರ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಮತ್ತು ಅವಳು ಆಸ್ಪತ್ರೆಯ ಆವರಣದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ” ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ಐಎಎನ್ಎಸ್ಗೆ ತಿಳಿಸಿದ್ದಾರೆ.
ಈವಿಚಾರದಿಂದ ಕೋಪಗೊಂಡ ಸಂಬಂಧಿಕರು, ಮಹಿಳೆ ಇಡೀ ರಾತ್ರಿ ಆಸ್ಪತ್ರೆಯ ಹೊರಗೆ ನೋವಿನಿಂದ ನರಳುತ್ತಿದ್ದಳು ಆದರೂ ಕೂಡಾ ಆಸ್ಪತ್ರೆಯವರು ಅವಳನ್ನು ದಾಖಲಿಸಲಿಲ್ಲ ಎಂದು ಆರೋಪಿಸಿದರು.
देश की राजधानी दिल्ली के सफदरजंग अस्पताल में एक गर्भवती महिला ने सफदरजंग अस्पताल के बाहर एक नवजात शिशु को दिया जन्म इस दुर्व्यवहार को क्या कहे दिल्ली व केंद्र सरकार की लचारता कहे यह अस्पताल परिसर स्टाफ की प्रंशसा कहे ?@PMOIndia @ArvindKejriwal pic.twitter.com/smOyRs2KFZ
— Ajay kanojiya Hindustani {INC} (@ajayaicc2022) July 19, 2022
ಈಗ ಮಹಿಳೆ ಮತ್ತುಮಗು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಸ್ತ್ರೀರೋಗ ವಿಭಾಗದ ಹಿರಿಯ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ .ಆಸ್ಪತ್ರೆಯ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ‘ಪ್ರಸ್ತುತ ವಿಷಯದಲ್ಲಿ ನಮಗೆ ಯಾವುದೇ ದೂರು ಬಂದಿಲ್ಲ’ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಎಚ್ಚರ..! ʻವಿಶ್ವದಲ್ಲೇ 3 ವೈರಸ್ ʼಗಳು, ಕರೋನಾ ವೈರಸ್ಗಿಂತ ಹೆಚ್ಚು ಅಪಾಯಕಾರಿ: ʼ ಶಾಕಿಂಗ್ ʼನೀಡಿದ ತಜ್ಞರು
ಈ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಶೀಘ್ರದಲ್ಲೇ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗುವುದು. ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಸಹ ಆಸ್ಪತ್ರೆಗೆ ನೋಟಿಸ್ ನೀಡಿದ್ದು, ಜುಲೈ 25 ರೊಳಗೆ ಈ ಬಗ್ಗೆ ಕ್ರಮ ಕೈಗೊಂಡ ವರದಿ ನೀಡುವಂತೆ ಕೋರಿದೆ.