ಬೆಂಗಳೂರು: ಮತದಾರರ ಪಟ್ಟಿಯ ( Voter List ) ಪರಿಷ್ಕರಣೆಯ ವೇಳೆಯಲ್ಲಿ ಬೆಂಗಳೂರಿನಲ್ಲಿ ಮತದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಅಕ್ರಮವೆಸಗಿದಂತ ಕೆಲ ಅಧಿಕಾರಿಗಳನ್ನು ಚುನಾವಣಾ ಆಯೋಗ ( Election Commission ) ಅಮಾನತುಗೊಳಿಸಿತ್ತು. ಈ ಬೆನ್ನಲ್ಲೇ ಖಾಸಗಿ ಸರ್ವೇ ( Private Survey ) ವೇಳೆ ಮತದಾರರ ಮಾಹಿತಿ ಸಂಗ್ರಹಕ್ಕೆ ಬ್ರೇಕ್ ಹಾಕಲಾಗಿದೆ.
ಮಂಡ್ಯದಲ್ಲಿ ಬಿಜೆಪಿ ಅಲೆ ಎದ್ದಿದೆ, 5 ಸ್ಥಾನ ಗೆಲ್ಲುವುದು ನಿಶ್ಚಿತ – ಸಿಎಂ ಬಸವರಾಜ ಬೊಮ್ಮಾಯಿ
ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ( Karnataka State Election Commission ) ಮುಖ್ಯ ಚುನಾವಣಾಧಿಕಾರಿ ಮನೋಜ್ ಮೀನಾ ಅವರು ಆದೇಶ ಹೊರಡಿಸಿದ್ದು, ಖಾಸಗಿ ಸರ್ವೆ ವೇಳೆ ಮತದಾರರ ಮಾಹಿತಿ ಸಂಗ್ರಹವನ್ನು ನಿರ್ಬಂಧಿಸಲಾಗಿದೆ. ಯಾವುದೇ ಏಜೆನ್ಸಿ, ಎನ್ ಜಿಓಗಳಿಗೆ ಅನುಮತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವುದಾಗಿ ತಿಳಿಸಿದ್ದಾರೆ.
BREAKING NEWS: 40 ಸಾವಿರ ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇ
ಇನ್ನೂ ಮತದಾರರ ಮಾಹಿತಿ ಸಂಬಂಧ ಯಾವುದೇ ವ್ಯಕ್ತಿ, ಸಂಸ್ಥೆಗಳು ಸರ್ವೆ ನಡೆಸುವ ಬಗ್ಗೆ ಸಂಬಂಧಪಟ್ಟ ಆಯಾ ಚುನಾವಣಾ ಸ್ಥಳೀಯ ಅಧಿಕಾರಿಗಳು ಗಮನಿಸುತ್ತಿರಬೇಕು ಎಂಬುದಾಗಿಯೂ ಸೂಚನೆ ನೀಡಲಾಗಿದೆ.
ಬೆಳಗಾವಿ ಚಳಿಗಾಲದ ಅಧಿವೇಶನ: ನಿಮ್ಮ ಶಾಸಕರು ಈ ಹೋಟೆಲ್ ನಲ್ಲಿ ಸಿಗ್ತಾರೆ
ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಬಳಿಕ, ರಾಜ್ಯದ ವಿವಿಧೆಡೆಯೂ ಇದೇ ಮಾದರಿಯಲ್ಲಿ ನಡೆದಿದೆ ಎಂಬುದಾಗಿ ಆರೋಪಿಸಲಾಗಿತ್ತು. ಅಲ್ಲದೇ ಖಾಸಗಿ ಸರ್ವೆ ಕಾರ್ಯ ಕೂಡ ನಡೆಸುತ್ತಿರೋ ಆರೋಪ ಕೇಳಿ ಬಂದಿತ್ತು. ಈಗಾಗೀ ರಾಜ್ಯ ಚುನಾವಣಾ ಆಯೋಗದಿಂದ ಖಾಸಗಿ ಸರ್ವೆಗೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ.