ಗುಜರಾತ್: ಗುಜರಾತ್ನ ಮೊರ್ಬಿ ನಗರದಲ್ಲಿ ಶತಮಾನದಷ್ಟು ಹಳೆಯದಾದ ಸೇತುವೆಯ ನವೀಕರಣದ ನಂತ್ರ, ಸೇತುವೆಯನ್ನು ಪುನಃ ತೆರೆಯುವ ಮೊದಲು ಅಧಿಕಾರಿಗಳಿಂದ ಬಳಕೆಗೆ ಯೋಗ್ಯ ಪ್ರಮಾಣಪತ್ರವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯ ಪುರಸಭೆಯ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒರೆವಾ ಎಂಬ ಖಾಸಗಿ ಟ್ರಸ್ಟ್ ಸರ್ಕಾರದ ಟೆಂಡರ್ ಪಡೆದು ಈ ಸೇತುವೆಯನ್ನು ನವೀಕರಿಸಿದೆ. ನವೀಕರಣಕ್ಕಾಗಿ ಸೇತುವೆಯನ್ನು ಏಳು ತಿಂಗಳಿನಿಂದ ಮುಚ್ಚಲಾಗಿತ್ತು. ಇದನ್ನು ಅಕ್ಟೋಬರ್ 26 ರಂದು ಮತ್ತೆ ತೆರೆಯಲಾಯಿತು.
“ಇದು ಸರ್ಕಾರಿ ಟೆಂಡರ್ ಆಗಿತ್ತು. ಓರೆವಾ ಗ್ರೂಪ್ ಸೇತುವೆಯನ್ನು ತೆರೆಯುವ ಮೊದಲು ಅದರ ನವೀಕರಣದ ವಿವರಗಳನ್ನು ನೀಡಿ ಮತ್ತು ಗುಣಮಟ್ಟವನ್ನು ಪರಿಶೀಲಿಸಬೇಕಾಗಿತ್ತು. ಆದರೆ ಅದು ಹಾಗೆ ಮಾಡಲಿಲ್ಲ. ಸರ್ಕಾರಕ್ಕೆ ಈ ಬಗ್ಗೆ ತಿಳಿದಿರಲಿಲ್ಲ” ಎಂದು ಮೋರ್ಬಿ ಮುನ್ಸಿಪಲ್ ಏಜೆನ್ಸಿ ಮುಖ್ಯಸ್ಥ ಸಂದೀಪ್ಸಿನ್ಹ್ ಝಾಲಾ ಹೇಳಿದ್ದಾರೆ.
ನಿನ್ನೆ ಈ ಸೇತುವೆ ಕುಸಿದು ಬಿದ್ದ ಪರಿಣಾಮ ಇಲ್ಲಿಯವರೆಗೂ ಸಾವಿನ ಸಂಖ್ಯೆ 130ಕ್ಕೆ ಏರಿಕೆಯಾಗಿದೆ. ಇನ್ನೂ ರಕ್ಷನಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
BIG NEWS: ಆಫ್ರಿಕನ್ ಸಂಗೀತ ತಾರೆ ʻಫಾಲಿ ಇಪುಪಾʼ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು: 11 ಮಂದಿ ಸಾವು
BIG NEWS : ಮೊರ್ಬಿ ಸೇತುವೆ ಕುಸಿತ ದುರಂತ: ದುಃಖ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ
BIG NEWS: ಆಫ್ರಿಕನ್ ಸಂಗೀತ ತಾರೆ ʻಫಾಲಿ ಇಪುಪಾʼ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು: 11 ಮಂದಿ ಸಾವು