ಬೆಂಗಳೂರು: ಶಾಲೆಗಳಲ್ಲಿ ಗಣೇಶ ಮೂರ್ತಿ ( Ganesha Idol ) ಪ್ರತಿಷ್ಠಾಪನೆಗೆ ಅವಕಾಶ ನೀಡಿದಂತ ಶಿಕ್ಷಣ ಇಲಾಖೆಗೆ ( Education Department ), ಈದ್ ಮಿಲಾದ್ ಆಚರಣೆಗೂ ಅವಕಾಶ ನೀಡುವಂತೆ ಮುಸ್ಲೀಂ ಮುಖಂಡರು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಶಾಲೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆಗೆ ಯಾವುದೇ ನಿರ್ಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಸ್ಪಷ್ಟ ಪಡಿಸಿದ್ದಾರೆ.
BIG NEWS: ತುಮಕೂರು ಅಪಘಾತದಲ್ಲಿ 9 ಜನರ ಸಾವಿನ ಹಿಂದಿನ ರಹಸ್ಯ ಬಯಲು: ಏನದು ಗೊತ್ತಾ.? | Tumkur Accident
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲೆಗಳಲ್ಲಿ ಗಣೇಷ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ. ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದೆ. ಮುಂದೆಯೂ ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯಲಿದೆ ಎಂದರು.
ಶಾಲೆಗಳಲ್ಲಿ ಈ ಪದ್ಧತಿಯು ಬಾಲಗಂಗಾಧರ ತಿಲಕ್ ಕಾಲದಿಂದಲೂ ಇದೆ. ಆದರೇ ಯಾವುದೇ ನಮಾಜ್, ಕೃಷ್ಣ ಪೂಜೆ, ಅಯ್ಯಪ್ಪ ಪೂಜೆ, ಕ್ರೈಸ್ತರ ಪ್ರಾರ್ಥನೆಗೆ ಶಾಲೆಗಳಲ್ಲಿ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.