ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ನಿತೀಶ್ ಕುಮಾರ್(Nitish Kumar) ಕೊನೆಗೊಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಡುವಿನ ಆಡಳಿತಾರೂಢ ಮೈತ್ರಿ ಮುಗಿದಿದೆ ಎಂದು ಘೋಷಿಸಿದ್ದಾರೆ.
ಎರಡನೇ ಬಾರಿಗೆ ಬಿಜೆಪಿಯನ್ನು ತ್ಯಜಿಸುವ ನಿರ್ಧಾರಕ್ಕೆ ಬರುವ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಶಾಸಕರೊಂದಿಗೆ ಸಭೆ ನಡೆಸಿದರು.
ರಾಜ್ಯದಲ್ಲಿ ಹಲವು ದಿನಗಳ ಹೋರಾಟದ ತೀವ್ರ ರಾಜಕೀಯದ ಹೋರಾಟದ ನಂತ್ರ, ಇಂದು ಪಕ್ಷದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದರು ಎಂದು ಮೂಲಗಳು ತಿಳಿಸಿವೆ.
ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ಮೂಲವೊಂದು, “ಈ ಮೈತ್ರಿ ಉಳಿಯುತ್ತದೆ ಎಂದು ನಿರೀಕ್ಷಿಸುವುದು ತುಂಬಾ ಕಷ್ಟ. ಇದು ಅನಾರೋಗ್ಯದ ರೋಗಿಯ ಕುಟುಂಬವು ಭರವಸೆಯನ್ನು ಬಿಟ್ಟುಕೊಡಲು ನಿರಾಕರಿಸಿದಂತೆ” ಎಂದು ಎಚ್ಚರಿಸಿದ್ದಾರೆ.
ಇಂದು ಸಂಜೆ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ನಿಗಧಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Big news: ಒಂದು ತಿಂಗಳೊಳಗೆ ದೇಶದಲ್ಲಿ 5G ಇಂಟರ್ನೆಟ್ ಸೇವೆ ಲಭ್ಯ: ಟೆಲಿಕಾಂ ರಾಜ್ಯ ಸಚಿವ ದೇವುಸಿನ್ ಚೌಹಾಣ್
Breaking news: ಮಹಿಳೆ ಮೇಲೆ ಹಲ್ಲೆ, ನಿಂದನೆ ಆರೋಪ: ಯುಪಿ ರಾಜಕರಣಿ ಶ್ರೀಕಾಂತ್ ತ್ಯಾಗಿ ಅರೆಸ್ಟ್
Breaking news: ಮಹಾರಾಷ್ಟ್ರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ & ಶಿವಸೇನೆಯ 18 ಶಾಸಕರು