Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Eat Garlic Daily: ದಿನವೂ ಬೆಳ್ಳುಳ್ಳಿ ತಿಂದರೆ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಅಚ್ಚರಿಯ ಮಾಹಿತಿ!

BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

Rain Alert: ಮೇ.29ರವರೆಗೆ ರಾಜ್ಯದಲ್ಲಿ ವರುಣನ ಆರ್ಭಟ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಷ್ಟ್ರಪ್ರಶಸ್ತಿ ವಿಜೇತ ದೇಸಿ ಕಲಾವಿದರನ್ನು ಸನ್ಮಾನಿಸಿದ ನೀತಾ ಅಂಬಾನಿ; ಬಾಲಿವುಡ್ ತಾರಾಬಳಗ ಸಹ ಭಾಗಿ
INDIA

ರಾಷ್ಟ್ರಪ್ರಶಸ್ತಿ ವಿಜೇತ ದೇಸಿ ಕಲಾವಿದರನ್ನು ಸನ್ಮಾನಿಸಿದ ನೀತಾ ಅಂಬಾನಿ; ಬಾಲಿವುಡ್ ತಾರಾಬಳಗ ಸಹ ಭಾಗಿ

By ವಸಂತ ಬಿ ಈಶ್ವರಗೆರೆ

ಮುಂಬೈ : ಸ್ವದೇಶ್ ನಿಂದ ಆರಂಭವಾದಂಥ ಪ್ರತಿಷ್ಠಿತ ಮಳಿಗೆ ಇರೋಸ್ (Eros) ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು. ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅದರ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಕಲಾವಿದರು ಹಾಗೂ ಕುಶಲಕರ್ಮಿಗಳನ್ನು ಸನ್ಮಾನಿಸಿದರು. ಭಾರತದ ವೈವಿಧ್ಯಮಯ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು, ಮುಂದುವರಿಸಿಕೊಂಡು ಬಂದಂಥ ಕಲಾವಿದರು ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕುಶಲಕರ್ಮಿಗಳು ಈ ಕಾರ್ಯಕ್ರಮಕ್ಕೆ ಕಳೆ ತಂದಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ತಾರಾ ಬಳಗವೇ ತುಂಬಿಹೋಗಿತ್ತು. ಆದ್ದರಿಂದ ಒಂದಿಷ್ಟು ಗ್ಲ್ಯಾಮರ್ ಕೂಡ ಸೇರ್ಪಡೆಯಾಯಿತು.

ಮಾಧ್ಯಮಗಳ ಸಮ್ಮುಖದಲ್ಲಿ ನೀತಾ ಅಂಬಾನಿ ಅವರು ರಾಷ್ಟ್ರಪ್ರಶಸ್ತಿ ವಿಜೇತ ಕುಶಲಕರ್ಮಿಗಳನ್ನು ಗೌರವಿಸಿದರು. ಮತ್ತು “ಇವರೆಲ್ಲ ಭಾರತ ದೇಶದ ಹೆಮ್ಮೆ ಹಾಗೂ ಈ ರಾತ್ರಿಯಲ್ಲಿನ ನಿಜವಾದ ತಾರೆಗಳು,” ಎಂದು ಮೆಚ್ಚುಗೆ ಮಾತುಗಳನ್ನು ಆಡಿದರು. “ನಾವು ನಿಮ್ಮನ್ನೆಲ್ಲ ಸ್ವದೇಶ್ ಗೆ ಸ್ವಾಗತಿಸುತ್ತೇವೆ. ನಮ್ಮ ಕಲಾವಿದರು- ಕುಶಲಕರ್ಮಿಗಳನ್ನು ಗೌರವಿಸುವ ಮೂಲಕ ಹಬ್ಬದ ಋತುವಿನ ಆರಂಭವನ್ನು ಈ ದಿನ ಸಂಭ್ರಮಿಸುತ್ತಾ ಇದ್ದೇವೆ. ಅವರು ಭಾರತದ ಹೆಮ್ಮೆ ಹಾಗೂ ಈ ರಾತ್ರಿಯ ತಾರೆಗಳು. ಇವತ್ತು ನಮ್ಮ ಜೊತೆಗೆ ರಾಷ್ಟ್ರಪ್ರಶಸ್ತಿ ವಿಜೇತರಾದ ಹಲವು ಕಲಾವಿದರು- ಕುಶಲಕರ್ಮಿಗಳು ಇದ್ದಾರೆ. ತುಂಬು ಸಂತೋಷದಿಂದ ಹಾಗೂ ಗೌರವದಿಂದ ಅವರನ್ನು ಸ್ವಾಗತಿಸುತ್ತೇನೆ. ಕಾಶ್ಮೀರ, ಒಡಿಶಾ, ತಮಿಳುನಾಡು, ಹೈದರಾಬಾದ್ ಮತ್ತು ಜೈಪುರ ಹೀಗೆ ಭಾರತದ ನಾನಾ ಭಾಗಗಳಿಂದ ಅವರು ಬಂದಿದ್ದಾರೆ. ಅವರಿಗೆ ನಮ್ಮೆಲ್ಲರ ಮೆಚ್ಚುಗೆಯ ಚಪ್ಪಾಳೆ ಇರಲಿ. ನಮ್ಮ ಸಮಯದ ನಿಜವಾದ ಹೆಮ್ಮೆ ಅವರು. ಅದ್ಭುತವಾದ ಹಬ್ಬದ ಸಮಯ ನಿಮ್ಮದಾಗಲಿ,” ಎಂದರು.

ಬಿರೇನ್ ಬಸಕ್ ಅವರಿಗೆ ಪದ್ಮಶ್ರೀ ಗೌರವ ಲಭಿಸಿದ್ದು, ಅವರಿಗೆ ತಂಗೈಲ್ ಮತ್ತು ಜಾಮ್ ದನಿ ನೇಯ್ಗೆಗೆ ದೊಡ್ಡ ಹೆಸರು. ತಂಜಾವೂರ್ ಚಿತ್ರ ಕಲಾವಿದ ವಿ. ಪನ್ನೀರ್ ಸೆಲ್ವಂ ಅವರಿಗೆ ಶಿಲ್ಪ ಗುರು ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಶಮ್ಮಿ ಬನ್ನು ಶರ್ಮಾ ಏಳನೇ ತಲೆಮಾರಿನ ಮಿನಿಯೇಚರ್ ಪೇಂಟರ್ ಹಾಗೂ ರಾಷ್ಟ್ರಪತಿ ಪ್ರಶಸ್ತಿ ವಿಜೇತರು. ಇನ್ನು ಘನ್ ಶ್ಯಾಮ್ ಸರೋದೆ ಅವರು ಪೈಥಾನಿ ಜವಳಿ ಡಿಸೈನರ್ ಆಗಿ ದೊಡ್ಡ ಹೆಸರು ಮಾಡಿದವರು ಹಾಗೂ ಕೈಮಗ್ಗದ ಪುನರುಜ್ಜೀವನಕ್ಕೆ ಬಹಳ ಶ್ರಮಿಸಿದವರು ಹಾಗೂ ಒಡಿಶಾದ ಇಕಟ್ ಜವಳಿ ಕಲಾವಿದರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತರಾದ ಗುಂಜನ್ ಜೈನ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಎಲ್ಲ ಕಲಾವಿದರಿಗೆ ಹಿಂದಿನ ವರ್ಷಗಳಲ್ಲಿ ರಾಷ್ಟ್ರಪ್ರಶಸ್ತಿ ಬಂದಿವೆ.

ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ರಿಲಯನ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ತಮ್ಮ ಪತ್ನಿ ಶ್ಲೋಕಾ ಮೆಹ್ತಾ ಜತೆಗೂಡಿ ಬಂದಿದ್ದರು. ಖುಷಿ ಕಪೂರ್, ಜಾಹ್ನವಿ ಕಪೂರ್ ಸಜ ಸ್ವದೇಶ್ ಸಂಭ್ರಮದ ಭಾಗವಾದರು. ಕರೀಷ್ಮಾ ಕಪೂರ್, ರವಿನಾ ಟಂಡನ್, ರಿತೇಶ್ ದೇಶ್ ಮುಖ್ ಮತ್ತು ಪತ್ನಿ ಜೆನಿಲಿಯಾ, ಮಾಧುರಿ ದೀಕ್ಷಿತ್, ಯುವರಾಜ್ ಸಿಂಗ್, ಹಜೆಲ್ ಕೀಚ್, ಆದಿತಿ ರಾವ್ ಹೈದರಿ ಇನ್ನೂ ಹಲವಾರು ಮಂದಿ ತಾರೆಗಳು ಕಾಣಿಸಿಕೊಂಡರು. ದೇಶೀಯ ಕಲೆ ಹಾಗೂ ಕಲಾವಿದರ ಪ್ರೋತ್ಸಾಹಕ್ಕಾಗಿ ಆರಂಭವಾದದ್ದು “ಸ್ವದೇಶ್”. ಅದರ ರೂಪು- ರೇಷೆ, ಕನಸು ಕಂಡಂಥವರು ನೀತಾ ಅಂಬಾನಿ.

ಗಮನ ಸೆಳೆದ ನೀತಾ ಅಂಬಾನಿ ದಿರಿಸು- ಒಡವೆ:

ನೀತಾ ಅಂಬಾನಿ ಅವರು ಸ್ವದೇಶ್‌ನ ನವಿಲು ನೀಲಿ ಬಣ್ಣದ ಬನಾರಸಿ ಸೀರೆಯನ್ನು ಧರಿಸಿದ್ದರು. ಇದರಲ್ಲಿ ಸಂಕೀರ್ಣವಾದ ಮೀನಿನ ಚಿಹ್ನೆಗಳು ಮತ್ತು ಸಾಂಪ್ರದಾಯಿಕ ಕಧುವಾ ನೇಯ್ಗೆ ತಂತ್ರವಿತ್ತು. ಇನ್ನು ಮನೀಶ್ ಮಲ್ಹೋತ್ರಾ ಸಿದ್ಧಪಡಿಸಿದ ಬ್ಲೌಸ್ ನಲ್ಲಿ ಪೋಲ್ಕಿ ಬಾರ್ಡರ್, ಕೈಯಿಂದ ದೇವರನ್ನು ಚಿತ್ರಿಸಿದ ಗುಂಡಿಗಳು ಮತ್ತು ಅವರ ವೈಯಕ್ತಿಕ ಸಂಗ್ರಹದಿಂದ ವಿಂಟೇಜ್ ಆಭರಣಗಳನ್ನು ಸಹ ಧರಿಸಿದ್ದರು. 100 ವರ್ಷಗಳಿಗಿಂತ ಹಳೆಯದಾದ ಕುಂದನ್ ಪೋಲ್ಕಿ ಕಿವಿಯೋಲೆಗಳು, ಸ್ವದೇಶ್‌ನ ಕೈಯಿಂದ ತಯಾರಿಸಿದ ಜಾಡೌ ಪಕ್ಷಿ ಉಂಗುರ ಮತ್ತು ಅವರ ತಾಯಿಯಿಂದ ಬಂದಂಥ ಪರಂಪರೆಯ ಹಾತ್ ಫೂಲ್ – ಅಮೂಲ್ಯವಾದ ಕುಟುಂಬ ಉಡುಗೊರೆಯಾದ ಜಡೆಬಿಲ್ಲೆಯೊಂದಿಗೆ ಕಂಡುಬಂದರು.

‘ಟ್ರೆಂಡ್ಸ್’ನಿಂದ ಟ್ರೆಂಡ್ಸ್ ಪಾರ್ಟಿ ಕ್ರ್ಯಾಶರ್ಸ್ – ಫ್ಯಾಷನ್ ದಟ್ ಗೆಟ್ಸ್ ಯು ಮೇಳ

ಸ್ವದೇಶ್ ಫ್ಲ್ಯಾಗ್ ಶಿಪ್ ಸ್ಟೋರ್ ಆಚರಣೆ ವೇಳೆ ‘ಬನಾರಸಿ ಸೀರೆ’ಯುಟ್ಟು ಗಮನ ಸೆಳೆದ ‘ನೀತಾ ಅಂಬಾನಿ’

Share. Facebook Twitter LinkedIn WhatsApp Email

Related Posts

ದಿನಾ ಬಳಸಿದ್ರೂ ‘ಪಾಸ್‌ವರ್ಡ್’ ಮರೆತುಹೋಗುತ್ತಾ?: ಪ್ರತಿದಿನ ಟೈಪ್ ಮಾಡಿದ್ರೂ ಮರೆವಿನ ಆಟ ಶುರುವಾಗಲು ಅಸಲಿ ಕಾರಣ ಇಲ್ಲಿದೆ

2 Mins Read

​ಮೆದುಳಿನ ಕಾರ್ಯಕ್ಷಮತೆಯ ಮೇಲೆ ‘ಮಾನಸಿಕ ಒತ್ತಡ’ದ ಭೀಕರ ಪರಿಣಾಮ: ಹಳೇ ನೆನಪುಗಳಿಗೆ ಹೊಸ ಮಾಹಿತಿ ಲಿಂಕ್ ಮಾಡುವ ಸಾಮರ್ಥ್ಯ ಕುಂಠಿತ: ವರದಿ

2 Mins Read

BIG NEWS: ‘ಖಾಸಗಿ ಶಾಲೆ’ಗಳ ಶುಲ್ಕ ಹೆಚ್ಚಳಕ್ಕೆ ‘ಸರ್ಕಾರದ ಮುಂಚಿತ ಅನುಮತಿ’ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

2 Mins Read
Recent News

Eat Garlic Daily: ದಿನವೂ ಬೆಳ್ಳುಳ್ಳಿ ತಿಂದರೆ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಅಚ್ಚರಿಯ ಮಾಹಿತಿ!

BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

Rain Alert: ಮೇ.29ರವರೆಗೆ ರಾಜ್ಯದಲ್ಲಿ ವರುಣನ ಆರ್ಭಟ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

ದಿನಾ ಬಳಸಿದ್ರೂ ‘ಪಾಸ್‌ವರ್ಡ್’ ಮರೆತುಹೋಗುತ್ತಾ?: ಪ್ರತಿದಿನ ಟೈಪ್ ಮಾಡಿದ್ರೂ ಮರೆವಿನ ಆಟ ಶುರುವಾಗಲು ಅಸಲಿ ಕಾರಣ ಇಲ್ಲಿದೆ

State News
KARNATAKA

BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕಲಬುರಗಿ: ವೈದ್ಯಕೀಯ ಶಿಕ್ಷಣದ (MBBS) ಕನಸು ಹೊತ್ತಿದ್ದ ನೀಟ್ ಆಕಾಂಕ್ಷಿ, ಯುವತಿಯೊಬ್ಬಳು ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ…

Rain Alert: ಮೇ.29ರವರೆಗೆ ರಾಜ್ಯದಲ್ಲಿ ವರುಣನ ಆರ್ಭಟ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

BREAKING: ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ನೇಣಿಗೆ ಶರಣು

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.