ದಕ್ಷಿಣ ಕನ್ನಡ ಜಿಲ್ಲೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಅಲ್ಲದೇ ನಿನ್ನೆ ಮುಸ್ಲೀಂ ಯುವಕನ ಹತ್ಯೆ ಬಳಿಕ ಮತ್ತಷ್ಟು ಉದ್ವಿಗ್ನಗೊಂಡಿದೆ. ಹೀಗಾಗಿ ಆಗಸ್ಟ್ 6ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು, ದಿನಾಂಕ 26-07-2022ರಂದು ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆಯಲ್ಲಿ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ತೆರಳೋದಕ್ಕೆ ಪ್ರವೀಣ್ ನೆಟ್ಟಾರ್ ತಮ್ಮ ಬೈಕ್ ನಲ್ಲಿ ಕುಳಿತಿದ್ದಂತ ಸಂದರ್ಭದಲ್ಲಿ, ಮೂವರು ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ, ಅವರು ತೀವ್ರಗಾಯಗೊಂಡು ಚಿಕಿತ್ಸೆ ಫಲಿಸದಜೇ ಸಾವನ್ನಪ್ಪಿದ್ದಾರೆ.
ಈ ಹಿನ್ನಲೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿರುತ್ತದೆ. ಮುಂದುವರೆದು ದಿನಾಂಕ 28-07-2022ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಸ್ಲೀಂ ಯುವಕನ ಹತ್ಯೆಯ ನಂತ್ರ ಪರಿಸ್ಥಿತಿ ಮತ್ತಷ್ಟು ಬಿಗುವಾಗಿರುತ್ತದೆ.
Breaking news: ಮಾಸ್ಕೋದಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ: 8 ಮಂದಿ ಸಾವು, ಹಲವರ ರಕ್ಷಣೆ
ಈ ಕಾರಣದಿಂದಾಗಿ ದಕ್ಷಇಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ದಿನಾಂಕ 29-07-2022ರ ಇಂದಿನ ಮಧ್ಯರಾತ್ರಿ 12 ಗಂಟೆಯಿಂದ ದಿನಾಂಕ 06-08-2022 ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ 5ಕ್ಕಿಂತ ಹೆಚ್ಚು ಜನರು ಸೇರೋದು, ಮೆರವಣಿಗೆ, ಸಭೆ ಸಮಾರಂಭ ನಡೆಸೋದು ನಿಷೇಧಿಸಲಾಗಿದೆ. ಪಟಾಕಿ ಸಿಡಿಸೋದು, ಮಾರಕಾಸ್ತ್ರಗಳನ್ನು ಒಯ್ಯುವುದು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.