ಮಂಗಳೂರು: ಪಿಎಫ್ಐ, ಎಸ್ಡಿಪಿಐ ಕಚೇರಿ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದ್ರೆ ಈ ವೇಳೆ ಎನ್ಐಎ ಅಧಿಕಾರಿಗಳು ಎಸ್ಡಿಪಿಐ ಕಚೇರಿಯ ಬಾಗಿಲು ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
BIGG BREAKING NEWS : ದೇಶಾದ್ಯಂತ `NIA’ ದಾಳಿ : ಕರ್ನಾಟಕದ 20 ಮಂದಿ ಸೇರಿ 106 `PFI’ ಕಾರ್ಯಕರ್ತರ ಬಂಧನ
ಈ ಕುರಿತು ಎಸ್ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಮಾತನಾಡಿ, ನಮ್ಮ ಕಚೇರಿ ಮೇಲೆ ದಾಳಿ ಮಾಡುವ ವೇಳೆ ಎನ್ಐಎ ಅಧಿಕಾರಿಗಳು ಅನಾಗರಿಕರಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದರು.
BIGG BREAKING NEWS : ದೇಶಾದ್ಯಂತ `NIA’ ದಾಳಿ : ಕರ್ನಾಟಕದ 20 ಮಂದಿ ಸೇರಿ 106 `PFI’ ಕಾರ್ಯಕರ್ತರ ಬಂಧನ
ಎನ್ಐಎ ಇನ್ಸ್ಪೆಕ್ಟರ್ ಷಣ್ಮುಗಂ ಅವರ ತಂಡ ದಾಳಿ ನಡೆಸಲು ಬಂದಾಗ ಕಚೇರಿಯ ಬಾಗಿಲುಗಳ ಗಾಜನ್ನು ಒಡೆದುಹಾಕಿದ್ದಾರೆ. ಕಚೇರಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಎನ್ಐಎ ಅಧಿಕಾರಿಗಳು ಸರ್ಚ್ ವಾರಂಟ್ ಇಲ್ಲದೆ ಎಸ್ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.