ನ್ಯೂಯಾರ್ಕ್: ಲಾಂಗ್ ಐಲ್ಯಾಂಡ್ನ ನಸ್ಸೌ ಕೌಂಟಿಯಲ್ಲಿನ ತ್ಯಾಜ್ಯನೀರಿನ ಮಾದರಿಗಳಲ್ಲಿ ಪೋಲಿಯೊ ವೈರಸ್(Polio Virus) ಹರಡುವಿಕೆ ಕಂಡುಬಂದ ಪರಿಣಾಮ ನ್ಯೂಯಾರ್ಕ್ ತುರ್ತು ಪರಿಸ್ಥಿತಿ ಘೋಷಿಸಿದೆ.
ನಾಲ್ಕು ಕೌಂಟಿಗಳಲ್ಲಿ ತೆಗೆದ ತ್ಯಾಜ್ಯನೀರಿನ ಮಾದರಿಗಳಲ್ಲಿ ವೈರಸ್ ಪತ್ತೆಯಾಗಿದೆ. ಪೋಲಿಯೊ ವಿರುದ್ಧ ಹೋರಾಡಲು ನಿವಾಸಿಗಳಿಗೆ ಲಸಿಕೆ ಹಾಕುವ ಪ್ರಯತ್ನ ವೇಗಗೊಳಿಸಲಾಗಿದೆ. ಹೀಗಾಗಿ, ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ಶುಕ್ರವಾರ ವಿಪತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
ವೈರಸ್ ಪತ್ತೆ ಹಿನ್ನೆಲೆ ಲಸಿಕೆ ಪ್ರಮಾಣ ವಿಸ್ತರಿಸಲಾಗಿದೆ. ನೀವು ಅಥವಾ ನಿಮ್ಮ ಮಗುವಿಗೆ ಲಸಿಕೆ ಹಾಕದಿದ್ದರೆ ಅಥವಾ ಲಸಿಕೆಗಳೊಂದಿಗೆ ನವೀಕೃತವಾಗಿಲ್ಲದಿದ್ದರೆ, ಪಾರ್ಶ್ವವಾಯು ಕಾಯಿಲೆ ಅಪಾಯ ಹೆಚ್ಚಾಗುತ್ತದೆ. ಲಸಿಕೆ ಪಡೆಯದಿದ್ದವರು ಕೂಡಲೇ ಲಸಿಕೆ ಹಾಗಕಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಕಳೆದ ತಿಂಗಳು ನ್ಯೂಯಾರ್ಕ್ ಸಿಟಿ ಬರೋ ಆಫ್ ಕ್ವೀನ್ಸ್ನ ಗಡಿಯಲ್ಲಿರುವ ಲಾಂಗ್ ಐಲ್ಯಾಂಡ್ನ ನಸ್ಸೌ ಕೌಂಟಿಯ ಮಾದರಿಗಳಲ್ಲಿ ವೈರಸ್ ಪತ್ತೆಯಾಗಿತ್ತು. ಈ ವರ್ಷದ ಆರಂಭದಲ್ಲಿ ನಗರದ ಉತ್ತರ ಭಾಗದಲ್ಲಿರುವ ರಾಕ್ಲ್ಯಾಂಡ್, ಆರೆಂಜ್ ಮತ್ತು ಸುಲ್ಲಿವಾನ್ ಕೌಂಟಿಗಳ ಮಾದರಿಗಳಲ್ಲಿ ವೈರಸ್ ಪತ್ತೆಯಾಗಿತ್ತು. ಜುಲೈನಲ್ಲಿ, ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಸುಮಾರು ಒಂದು ದಶಕದಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ಪೋಲಿಯೊ ಪ್ರಕರಣವು ರಾಕ್ಲ್ಯಾಂಡ್ ಕೌಂಟಿಯಲ್ಲಿ ವಯಸ್ಕರಲ್ಲಿ ಕಂಡುಬಂದಿದೆ.
ಮಹಿಳೆ ಮಾತು ಕೇಳಿ ವಿಡಿಯೋ ಕಾಲ್ನಲ್ಲಿ ಬೆತ್ತಲಾದ ವ್ಯಕ್ತಿಗೆ 5.28 ಲಕ್ಷ ರೂ. ಪಂಗನಾಮ!