ನವದೆಹಲಿ : ದೇಶದ ರೈತರಿಗೆ ಸಿಹಿಸುದ್ದಿ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಮತ್ತೊಂದು ಕಂತಿನ ಹಣವನ್ನ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.
ಪಿಎಂ ಕಿಸಾನ್ ಯೋಜನೆಯಡಿ ಲಾಭ ಪಡೆಯುವ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ 13ನೇ ಕಂತಿನ ಹಣವನ್ನ ಶೀಘ್ರದಲ್ಲೇ ಪಡೆಯುವ ಸಾಧ್ಯತೆಯಿದೆ. ಅದ್ರಂತೆ, ಡಿಸೆಂಬರ್’ನಿಂದ ಮಾರ್ಚ್ ಅವಧಿಗೆ ಅನ್ನದಾತರಿಗೆ 2 ಸಾವಿರ ರೂ. ಶೀಘ್ರದಲ್ಲೇ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ.
ಮೋದಿ ಸರಕಾರ ರೈತರ ಬ್ಯಾಂಕ್ ಖಾತೆಗೆ ಇದುವರೆಗೆ 12 ಕಂತುಗಳ ಹಣವನ್ನ ಜಮಾ ಮಾಡಿದೆ. ಅಂದರೆ ಪ್ರತಿ ರೈತರಿಗೆ ಈಗಾಗಲೇ ರೂ. 24 ಸಾವಿರ ಸಿಕ್ಕಿದೆ ಎನ್ನಬಹುದು. ಹೊಸ ವರ್ಷದಲ್ಲಿ ಇನ್ನೂ ರೂ. 2 ಸಾವಿರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಪಿಎಂ ಕಿಸಾನ್ 13 ನೇ ಕಂತಿನ ಹಣವನ್ನ ಜನವರಿ 15ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು ಎಂದು ವರದಿಗಳು ಹೇಳುತ್ತವೆ. ಅಂದರೆ ಹೊಸ ವರ್ಷದಲ್ಲಿ ರೈತರಿಗೆ ಸಿಹಿಸುದ್ದಿ ಸಿಗಲಿದೆ. ವರದಿಗಳ ಪ್ರಕಾರ ಸಂಕ್ರಾಂತಿ ಹಬ್ಬದ ಮುನ್ನವೇ ರೈತರಿಗೆ ಹಣ ತಲುಪಬಹುದು.
BIGG NEWS : 1 ನೇ ತರಗತಿ ದಾಖಲಾತಿಗೆ 6 ವರ್ಷ ಪೂರ್ಣ ಕಡ್ಡಾಯ : ರಾಜ್ಯ ಸರ್ಕಾರ ಆದೇಶ