ಉಜ್ಜಯಿನಿ (ಮಧ್ಯಪ್ರದೇಶ) : ಉಜ್ಜಯಿನಿಯು ಸಾವಿರಾರು ವರ್ಷಗಳಿಂದ ಭಾರತದ ಸಮೃದ್ಧಿ ಮತ್ತು ಜ್ಞಾನವನ್ನು ಮುನ್ನಡೆಸಿದೆ ಮತ್ತು ನಂಬಿಕೆಯೊಂದಿಗೆ ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಮೂಲಕ ನವ ಭಾರತವು ಮುನ್ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ₹ 856 ಕೋಟಿ ವೆಚ್ಚದ ಮೊದಲ ಹಂತದ ‘ಮಹಾಕಾಲ ಲೋಕ’ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ, ಈ ಯೋಜನೆ ಉಜ್ಜಯಿನಿಯ ಕಂಪನ್ನು ಹೆಚ್ಚಿಸಲಿದೆ ಎಂದರು.
ಮೋದಿಯವರು “ಹರ್ ಹರ್ ಮದದೇವ್” ಎಂದು ಪಠಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಈ ವೇಳೆ ‘ಮಹಾಕಾಲ ಲೋಕ’ದ ಹಿರಿಮೆಯು ಮುಂದಿನ ಪೀಳಿಗೆಗೆ ‘ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ’ಯನ್ನು ನೀಡುತ್ತದೆ ಎಂದರು. ನವ ಭಾರತವು ತನ್ನ ಪ್ರಾಚೀನ ಮೌಲ್ಯಗಳೊಂದಿಗೆ ಮುನ್ನಡೆಯುತ್ತಿರುವಾಗ, ಅದು ನಂಬಿಕೆಯೊಂದಿಗೆ ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದು ಅವರು ಹೇಳಿದರು.
‘PUC’ ವಿದ್ಯಾರ್ಥಿನಿಗೆ ಬಸ್ ನಿಲ್ದಾಣದಲ್ಲಿಯೇ ತಾಳಿಕಟ್ಟಿ ಮದ್ವೆಯಾದ 17 ವರ್ಷದ ಬಾಲಕ
Rain in karnataka : ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ