ಕಠ್ಮಂಡು: ಹೈಡ್ರೋಜನ್ ತುಂಬಿದ ಬಲೂನ್ಗಳಿಗೆ ಬೆಂಕಿ ತಗುಲಿ ಪೋಖರಾ ಮೆಟ್ರೋಪಾಲಿಟನ್ ಮೇಯರ್ ಧನರಾಜ್ ಆಚಾರ್ಯ ಅವರೊಂದಿಗೆ ನೇಪಾಳದ ಹಣಕಾಸು ಸಚಿವರೂ ಆಗಿರುವ ಪೌಡೆಲ್ ಗಾಯಗೊಂಡಿದ್ದಾರೆ.
ನೇಪಾಳದ ಕಾಸ್ಕಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮೇಳದ ಉದ್ಘಾಟನೆಯ ಸಂದರ್ಭದಲ್ಲಿ ನೇಪಾಳದ ಉಪ ಪ್ರಧಾನಿ ಬಿಷ್ಣು ಪ್ರಸಾದ್ ಪೌಡೆಲ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಠ್ಮಂಡುವಿಗೆ ವಿಮಾನದಲ್ಲಿ ಕರೆದೊಯ್ಯಲಾಗಿದೆ.
‘ಪೋಖರಾ ವಿಸಿಟ್ ಇಯರ್’ 2025 ರ ಉದ್ಘಾಟನೆಯ ಸಂದರ್ಭದಲ್ಲಿ ಮೇಣದಬತ್ತಿಯನ್ನು ಬೆಳಗಿಸುವಾಗ ಹೈಡ್ರೋಜನ್ ತುಂಬಿದ ಬಲೂನ್ಗಳಿಗೆ ಬೆಂಕಿ ತಗುಲಿ ನೇಪಾಳದ ಹಣಕಾಸು ಸಚಿವರೂ ಆಗಿರುವ ಪೌಡೆಲ್ ಮತ್ತು ಪೋಖರಾ ಮೆಟ್ರೋಪಾಲಿಟನ್ ಮೇಯರ್ ಧನರಾಜ್ ಆಚಾರ್ಯ ಗಾಯಗೊಂಡಿದ್ದಾರೆ.
2025 ರಲ್ಲಿ ಸುಮಾರು ಎರಡು ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಲಿರುವ ಪೋಖರಾ ಭೇಟಿ ವರ್ಷವನ್ನು ಶನಿವಾರ ಉದ್ಘಾಟಿಸಲಾಗುತ್ತಿದ್ದು, ಹೈಡ್ರೋಜನ್ ತುಂಬಿದ ಬಲೂನ್ಗಳಲ್ಲಿ ಬೆಂಕಿಯಿಂದಾಗಿ ಸಚಿವ ಪೌಡೆಲ್ ಮತ್ತು ಮೇಯರ್ ಆಚಾರ್ಯ ಗಾಯಗೊಂಡಿದ್ದಾರೆ