ನವದೆಹಲಿ: ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕಾಗಿ ನಡೆಯುವಂತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ್ದಂತ ನೀಟ್ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ನಿನ್ನೆ ಪ್ರಕಟಿಸಲಾಗಿದೆ. ಪ್ರಕಟಿತ ಫಲಿತಾಂಶದಲ್ಲಿ ರಾಜಸ್ಥಾನದ ತನಿಷ್ಕಾ ಟಾಪರ್ ಆಗಿದ್ದರೇ, ಕರ್ನಾಟಕದ ಹೃಷಿಕೇಶ್ ನಾಗಭೂಷಣ್ ಗಂಗೊಲೆ, ರುಚಾ ಪಾವ್ಚೆ ಮತ್ತು ಕೃಷ್ಣಾ ಎಸ್ ಆರ್ ಕ್ರಮವಾಗಿ 3, 4 ಮತ್ತು 8ನೇ ಸ್ಥಾನ ಪಡೆದಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ‘ಸೆಂಟ್ರಲ್ ವಿಸ್ತಾ’, ‘ಕರ್ತವ್ಯ ಪಥ’ಕ್ಕೆ ಚಾಲನೆ | Central Vista
ಕಳೆದ ಜುಲೈ. 17ರಂದು ಎನ್ ಟಿಎ ಮೂಲಕ ನೀಟ್ ಪರೀಕ್ಷೆಯನ್ನು ನಡೆಸಲಾಗಿತ್ತು. ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕಾಗಿ ನಡೆದಂತ ಈ ಪರೀಕ್ಷೆಗಾಗಿ 16.14 ಲಕ್ಷ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಿದ್ದರು. 497 ನಗರಗಳ 3570 ಕೇಂದ್ರಗಳಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಬಿಜೆಪಿ ‘ಜನೋತ್ಸವ ಕಾರ್ಯಕ್ರಮ’ದ ಹೆಸರು ‘ಜನಸ್ಪಂದನ’ವಾಗಿ ಬದಲು: ಸೆ.10ರ ‘ಶನಿವಾರ’ದಂದು ಕಾರ್ಯಕ್ರಮ ಫಿಕ್ಸ್
ಹೀಗೆ ನಡೆದಂತ ಪರೀಕ್ಷೆಯಲ್ಲಿ 16.14 ಲಕ್ಷ ವಿದ್ಯಾರ್ಥಿಗಳ ಪೈಕಿ 9.93 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೀಗೆ ಪಾಸ್ ಆದಂತವರ ಪೈಕಿ ನಾಲ್ವರು 720 ಅಂಕಗಳಿಗೆ 715 ಅಂಕ ಪಡೆದು ಟಾಪರ್ ಆಗಿ ಹೊರ ಹೊಮ್ಮಿಮದ್ದಾರೆ.