ಬೆಂಗಳೂರು: ಪ್ರಸಕ್ತ ಸಾಲಿನ ಯುಜಿನೀಟ್ ಅರ್ಜಿಯಲ್ಲಿ ಕರ್ನಾಟಕ ಎಂದು ನಮೂದಿಸಿ, ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ 87,909 ಅಭ್ಯರ್ಥಿಗಳ NEET Rank ಮತ್ತು ಪಡೆದ ಅಂಕಗಳ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಅತಿ ಹೆಚ್ಚು 670 ಅಂಕ ಪಡೆದ ಅಭ್ಯರ್ಥಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. 113 ಅಂಕ ಪಡೆದ ಅಭ್ಯರ್ಥಿ ಕೊನೆಯಲ್ಲಿ ಇದ್ದು, ಅವರು ಕೂಡ ಅರ್ಹತೆ ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಕೊಟ್ಟ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೀಟ್ ರೋಲ್ ನಂಬರ್ ನಮೂದಿಸಿ, ನೀಟ್ ಕೌನ್ಸೆಲಿಂಗ್ ಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ಒಂದೆರಡು ದಿನಗಳಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು. ಹಾಗೆಯೇ ನೀಟ್ ನಲ್ಲಿ ಅರ್ಹತೆ ಪಡೆದು, ಇದುವರೆಗೂ ಅರ್ಜಿಯನ್ನೇ ಸಲ್ಲಿಸದಿರುವವರಿಗೂ ನೋಂದಣಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
#UGNEET-25ರ ಅರ್ಜಿಯಲ್ಲಿ ಕರ್ನಾಟಕ ಎಂದು ನಮೂದಿಸಿ, ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ 87,909 ಅಭ್ಯರ್ಥಿಗಳ NEET Rank ಮತ್ತು Score ವಿವರಗಳನ್ನು #KEA ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಈ ಕೆಳಗಿನ ಲಿಂಕ್ ಒತ್ತಿ ಮಾಹಿತಿ ಪಡೆಯಬಹುದು.
UGNEET_MERIT_LIST_2025kannada.pdf https://t.co/rakuhq9Rog…
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) July 3, 2025