ಜ್ಯೂರಿಚ್ (ಸ್ವಿಟ್ಜರ್ಲೆಂಡ್): ಭಾರತದ ಸ್ಟಾರ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ(Neeraj Chopr) ಗುರುವಾರ(ಸೆಪ್ಟೆಂಬರ್ 8) ಇತಿಹಾಸ ನಿರ್ಮಿಸಿದ್ದಾರೆ. ಅಗ್ರ-ಶ್ರೇಣಿಯ ಅಥ್ಲೆಟಿಕ್ಸ್ ಸ್ಪರ್ಧೆಯಾದ ಪ್ರತಿಷ್ಠಿತ ಡೈಮಂಡ್ ಲೀಗ್ ಟ್ರೋಫಿ(Diamond League trophy)ಯನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೇ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಪರ್ಧೆಯಲ್ಲಿ 88.44 ಮೀ.ಗಳ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಡೈಮಂಡ್ ಲೀಗ್ನಲ್ಲಿ ಈ ಸಾಧನೆ ಮಾಡಿದ್ದಾರೆ.
ನೀರಜ್ ಆಟದ ಸ್ಪರ್ಧೆಯ ವಿಡೊಯೋ ಇಲ್ಲಿದೆ ನೋಡಿ…
Golds,Silvers done, he gifts a 24-carat Diamond 💎 this time to the nation 🇮🇳🤩
Ladies & Gentlemen, salute the great #NeerajChopra for winning #DiamondLeague finals at #ZurichDL with 88.44m throw.
FIRST INDIAN🇮🇳 AGAIN🫵🏻#indianathletics 🔝
X-*88.44*💎-86.11-87.00-6T😀 pic.twitter.com/k96w2H3An3
— Athletics Federation of India (@afiindia) September 8, 2022
ನೀರಜ್ ಚೋಪ್ರಾ ಅವರು ಈ ಬಾರಿ ನಡೆದ ಒಲಂಪಿಕ್ನಲ್ಲಿ ಚಿನ್ನದ ಪದಕ ಗೆದ್ದು, ದೇಶಕ್ಕೆ ಕೀರ್ತಿ ತಂದಿದ್ದರು. ಅಂದಿನಿಂದ ಇಲ್ಲಿಯವರೆಗೆ ನೀರಜ್ ತಮ್ಮ ಗುರಿ ಮುಟ್ಟುವ ಮೂಲಕ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
BIGG NEWS : ಉಡಾನ್ ಯೋಜನೆ : ಕರ್ನಾಟಕದ ರಾಯಚೂರು, ಹಾಸನ, ಕೋಲಾರ ಆಯ್ಕೆ
BIGG NEWS : ಬೆಂಗಳೂರಿನ ‘ಟ್ರಾಫಿಕ್ ನಿರ್ವಹಣೆ’ಗೆ ಪ್ರತ್ಯೇಕ ಪ್ರಾಧಿಕಾರ ರಚನೆ : ಸಿಎಂ ಬಸವರಾಜ ಬೊಮ್ಮಾಯಿ