ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಡಿಸೆಂಬರ್ 15ರಂದು ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್ 2022 ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ನೈರುತ್ಯ ರೈಲ್ಯೆ ಮೈಸೂರು ವಿಭಾಗವು, ದಿನಾಂಕ 15.12.2022 ರಂದು ಗುರುವಾರ 11 ಘಂಟೆಗೆ ವಿಭಾಗೀಯ ರೈಲ್ವೆ ಮ್ಯಾನೇಜರ್ ರವರ ಕಚೇರಿಯಲ್ಲಿ ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್ 2022 ನಡೆಸಲಾಗುತ್ತದೆ ಎಂದು ತಿಳಿಸಿದೆ.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ರೈಲ್ವೆ ಪಿಂಚಣಿದಾರರು , ಕುಟುಂಬ ಪಿಂಚಣಿದಾರರು ಮತ್ತು ಅವರ ಸದಸ್ಯರು ಭಾಗವಹಿಸಬಹುದು ಮತ್ತು ಅದಾಲತ್ತಿನಲ್ಲಿ ಯಾವುದಾದರೂ ಕುಂದು ಕೊರತೆಗಳನ್ನು ಅದಾಲತ್ ಸಮಯದಲ್ಲಿ ಪರಿಗಣನೆ ಮತ್ತು ಪರಿಹಾರಕ್ಕಾಗಿ ಪ್ರತಿನಿಧಿಸಬಹುದು ಎಂದು ಮಾಹಿತಿ ನೀಡಿದೆ.
ಡಿಸೆಂಬರ್ 15ರಂದು ರೈಲ್ವೆ ಪಿಂಚಣಿದಾರರು / ಕುಟುಂಬ ಪಿಂಚಣಿದಾರರ ಅನುಕೂಲಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯೋಜನ ಪಡೆಯುವಂತೆ ಕೋರಿದೆ.
ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ.. ʻವೀರ್ಯಾಣು ಸಂಖ್ಯೆ ಕಡಿಮೆʼಯಾಗುತ್ತದೆ : ಸಂಶೋಧನೆಯಲ್ಲಿ ಬಹಿರಂಗ