ಮೈಸೂರು: ನಗರದ ರುದ್ರ ನೃತ್ಯಯೋಗ ಶಾಲಾ ವತಿಯಿಂದ ಓಡಿಸ್ಸಿ ಇಂಟರ್ನ್ಯಾಷನಲ್ ಪೋರಂ, ಪುರಿಜಗನ್ನಾಥಕಲ್ಚರಲ್ಅಂಡ್ ವೆಲ್ ಪೇರ್ ಟ್ರಸ್ಟ್ ಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಓಡಿಸ್ಸಿ ಉತ್ಸವವನ್ನು ಆಯೋಜಿಸಲಾಗಿದೆ.
ರಾಮಕೃಷ್ಣ ನಗರದ ರಮಾಗೋವಿಂದರಂಗ ಮಂದಿರದಲ್ಲಿ ಡಿ. 10ರಂದು ಸಂಜೆ 5.30ರಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಹೆಸರಾಂತ ಓಡಿಸ್ಸಿ ನೃತ್ಯಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಓಡಿಸ್ಸಿ ನೃತ್ಯ ಮಹೋತ್ಸವದ ಸಂಸ್ಥಾಪಕ ಶಾಮ್ ಹರಿಚಕ್ರ, ಪುರಿಜಗನ್ನಾಥಕಲ್ಚರಲ್ಅಂಡ್ ವೆಲ-ಪೇರ್ ಟ್ರಸ್ಟ್ ನ ಅಧ್ಯಕ್ಷ ಘನಶ್ಯಾಮ ಪ್ರಧಾನ್, ಮೈಸೂರಿನ ಭೂಷಣ್ ಅಕಾಡೆಮಿ ಆಫ್ ಪರ್ಪಾರ್ಮಿಂಗ್ ಆರ್ಟ್ ನ ಬದರಿ ದಿವ್ಯ ಭೂಷಣ್, ಶ್ರೀ ಕೃಷ್ಣ ಗಾನ ಸಭಾದ ಅಧ್ಯಕ್ಷರಾದ ಶ್ರೀಧರ ರಾಜ ಅರಸ್, ನೃತ್ಯಗಿರಿ ಸ್ಕೂಲ್ ಆಪ್ ಡಾನ್ಸ್ ಅಂಡ್ ರಿಸರ್ಚ್ ಸೆಂಟರ್ನ ಕೃಪಾ ಪಡ್ಕೆ ಪಾಲ್ಗೊಳ್ಳಲಿದ್ದಾರೆ.
ಓಡಿಸ್ಸಿ ನೃತ್ಯ ಉತ್ಸವದಲ್ಲಿ ಬೆಂಗಳೂರಿನ ಚೈತ್ರಾಗೌಡ, ಸೋಹಿನಿ ಬೋಸ್ ಬ್ಯಾನರ್ಜಿ, ಅನುಶ್ರೀ ಪದ್ಮನಾಭ, ಬೀದರ್ನಜ್ಯೋತಿ ಸಮಂಥರಿಗೋಶಾಲ್, ಸುದರ್ಶನ ಸಾಹೋ, ಮೈಸೂರಿನರುದ್ರ ನೃತ್ಯಯೋಗ ಶಾಲೆಯ ನೃತ್ಯಗುರು ಸಿಂಧು ಕಿರಣ್, ವಿದ್ಯಾರ್ಥಿಗಳಾದ ಸಾಮ ವೇದ್ ಮೂಲ, ಪೃಥೆ ಹವಾಲ್ದಾರ್, ಸತ್ಯಶ್ರೀ ಬೆಹ್ರಾ, ಸಂಜಲಿ ಸೆಂಟರ್ -ಫಾರ್ ಓಡಿಸ್ಸಿ ಡ್ಯಾನ್ಸರ್ನ ಶರ್ಮಿಳಾ ಮುಖರ್ಜಿ, ಸುರ್ಜಿತ್ ಸೋಮ್, ಶ್ರೀಜಿತ್ ಸನ್ಯಾಲ್, ಬಿ. ಟಿ. ರವಿಶಂಕರ್, ಶ್ವೇತಾ ಶ್ರೀಧರನ್, ನಂದಿತಾ ಭಟ್ಟಾಚಾರ್ಯ, ಶ್ರೇಯಾಂಶಿ ದಾಸ್, ಜಾಹ್ನವಿ ಮುಡುಳಿ, ಪ್ರೀತಿ ಬ್ಯಾನರ್ಜಿ, ಬೆಂಗಳೂರಿನ ಆದ್ಯಶಾ ಸ್ಕೂಲ್ ಆಪ್ ಓಡಿಸ್ಸಿ ಡಾನ್ಸ್ ನ ಸರಿತಾ ಮಿಶ್ರ, ಅನಹಿತಾ, ಸಹನಾ, ಸಾಯ್ ಸೃಷ್ಟಿ, ಮಾನಸಿ, ಈಶ ಮೊದಲಾದವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಶಿವಮೊಗ್ಗ: ಡಿ.13ರಂದು ‘ಸಹ್ಯಾದ್ರಿ ಕಲಾ ಕಾಲೇಜಿ’ನಲ್ಲಿ ‘ಉದ್ಯೋಗ ಮೇಳ’ | Job Fair
ಈ ರಾಷ್ಟ್ರೀಯ ಓಡಿಸ್ಸಿ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಈ ಕಾರ್ಯಕ್ರಮದಲ್ಲಿ ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ಸವದ ಸಂಚಾಲಕಿ ನೃತ್ಯ ಗುರು ಸಿಂಧು ಕಿರಣ್ ಕೋರಿದ್ದಾರೆ.