ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಬ್ರದರ್ಸ್ ಗೆ ಇಡಿ ಸಮನ್ಸ್ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ನಾಳೆ ವಿಚಾರಣೆಗೆ ಹೋಗದಂತೆ ಡಿಕೆ ಬ್ರದರ್ಸ್ ನಿರ್ಧಾರ ಮಾಡಿದ್ದಾರೆ.
BIGG NEWS: ಕಾಂಗ್ರೆಸ್ ನ `ಭಾರತ್ ಜೋಡೋ ಪಾದಯಾತ್ರೆ ಆರಂಭ; 12 ನಿಮಿಷ ನಡೆದು ಕಾರು ಏರಿದ ಸೋನಿಯಾ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದಾರೆ. ಹೀಗಾಗಿ ನಾಳೆ ವಿಚಾರಣೆಗೆ ಹೋಗದಂತೆ ಡಿಕೆ ಬ್ರದರ್ಸ್ ನಿರ್ಧಾರಿಸಿದ್ದಾರೆ.
ಇಡಿ ಅಧಿಕಾರಿಗಳಿಗೆ ಬೇರೆ ದಿನಾಂಕ ನಿಗದಿಗೆ ಡಿಕೆ ಬ್ರದರ್ಸ್ ಮನವಿ ಮಾಡಿದ್ದಾರೆ. ಇ-ಮೇಲ್ ಮೂಲಕ ಇಡಿ ಅಧಿಕಾರಿಗಳಿಗೆ ಡಿಕೆ ಬ್ರದರ್ಸ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಡಿಕೆ ಸಹೋದರರ ಮನವಿಗೆ ಇಡಿ ಅಧಿಕಾರಿಗಳು ಸಮರ್ಪಕ ಪ್ರತಿಕ್ರಿಯೆ ನೀಡಿಲ್ಲ. ನಾಳೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದ್ದಾರೆ.