ರಾಜಸ್ಥಾನ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ರಾಜಸ್ಥಾನದ ದೌಸಾದ ಕಲಾಖೋದಿಂದ ಪ್ರಾರಂಭವಾಗಿದೆ. ಯಾತ್ರೆಯಲ್ಲಿ ಕೆಲ ಯುವಕರು ಸಚಿನ್ ಪೈಲಟ್ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಯಾತ್ರೆ ಇದಾಗಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ನಡೆಯಲಿದೆ. ಇದುವರೆಗೆ ಎಂಟು ರಾಜ್ಯಗಳಲ್ಲಿ 42 ಜಿಲ್ಲೆಗಳ ಮೂಲಕ 2860 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ್ದು, 100ನೇ ದಿನವಾದ ಇಂದು ರಾಜಸ್ಥಾನದ ದೌಸಾ ಮೂಲಕ ಪಾದಯಾತ್ರೆ ಆರಂಭವಾಗಿದೆ.ಕಾಂಗ್ರೆಸ್ ಯಾತ್ರೆಯ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
#WATCH | Congress party's Bharat Jodo Yatra resumed from Kalakho, Dausa in Rajasthan this morning.
Some youths, participating in the yatra, were seen raising slogans of 'Sachin Pilot zindabad' and 'Hamara CM kaisa ho? Sachin Pilot jaisa ho.' pic.twitter.com/MHeEwE6u1b
— ANI (@ANI) December 18, 2022
ರಾಜಕೀಯ ಹೋರಾಟಕ್ಕೆ ಭಾರೀ ಜನಸ್ತೋಮವನ್ನು ಸಜ್ಜುಗೊಳಿಸಲು ಬೀದಿಗಿಳಿದ ರಾಹುಲ್, ಬಹಳ ದಿನಗಳಿಂದ ಜಡವಾಗಿ ಕಾಣುತ್ತಿದ್ದ ಕಾಂಗ್ರೆಸ್ ಕಾರ್ತಯಕರ್ತರನ್ನು ಎಬ್ಬಿಸಿದ್ದು ಮಾತ್ರವಲ್ಲದೆ, ಪಕ್ಷದ ನಿರ್ವಿವಾದದ ಅಗ್ರಮುಖವಾಗಿಯೂ ಗುರುತಿಸಿಕೊಂಡಿದ್ದಾರೆ.
BIGG NEWS : ರಾಯಚೂರಿನಲ್ಲಿ ಸಹಜ ಹೆರಿಗೆ 15 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟ ಸರ್ಕಾರಿ ಆಸ್ಪತ್ರೆ ನರ್ಸ್!
SHOCKING NEWS: ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ
BIGG NEWS: ಅಮೆರಿಕದ ಅಟ್ಲಾಂಟಾ ಅಪಾರ್ಟ್ಮೆಂಟ್ ಬಳಿ ಗುಂಡಿನ ದಾಳಿ : ಇಬ್ಬರು ಸಾವು, ಹಲವರಿಗೆ ಗಾಯ| Shootout At US