ಲಾಸ್ ಏಂಜಲೀಸ್: ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ(Nancy Pelosi) ಪತಿ ಪಾಲ್ ಪೆಲೋಸಿ ಅವರು ನಾಪಾ ಕೌಂಟಿ ನಗರದ ಯೂಂಟ್ವಿಲ್ಲೆಯಲ್ಲಿ ಮೇ ಕಾರು ಅಪಘಾತಕ್ಕೀಡಾಗಿದೆ. ಈ ಸಂಬಂಧ ತಾವು ತಪ್ಪಿತಸ್ಥರೆಂದು ತಪ್ಪೊಪ್ಪಿಕೊಂಡಿದ್ದು, ಅವರಿಗೆ ಐದು ದಿನಗಳ ಜೈಲು ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕುಡಿದು ಕಾರು ಚಲಾಯಿಸಿದ ಆರೋಪದ ಮೇಲೆ 82ರ ವರ್ಷದ ಪೌಲ್ ಪೆಲೋಸಿ ಅವರು ಈಗಾಗಲೇ ಎರಡು ದಿನಗಳ ಜೈಲು ಶಿಕ್ಷೆ ಮುಗಿಸಿದ್ದು, ಇನ್ನೆರಡು ದಿನಗಳವರೆಗೆ ಜೈಲಿನಲ್ಲಿರಲಿದ್ದಾರೆ. ನಂತ್ರ ಅವರಿಗೆ ಯಾವುದೇ ಹೆಚ್ಚುವರಿ ಜೈಲು ಶಿಕ್ಷೆ ಇರುವುದಿಲ್ಲ ಎಂದು ನಾಪಾ ಕೌಂಟಿಯ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಜೋಸೆಫ್ ಸೊಲ್ಗಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿದೆ.
ಜೈಲಿನಲ್ಲಿ ಉಳಿದ ದಿನವನ್ನು ಪೂರೈಸುವ ಬದಲು, ನ್ಯಾಯಾಲಯದ ಕೆಲಸ ಮಾಡುವ ಮೂಲಕ ದಿನವನ್ನು ಉಳಿದ ಶಿಕ್ಷೆ ಪೂರ್ಣಗೊಳಿಸಲು ನ್ಯಾಯಾಲಯ ಆದೇಶಿಸಿದೆ ಎಂದು ಪೆಲೋಸಿಯ ವಕೀಲರು ಹೇಳಿದ್ದಾರೆ.
ಪೆಲೋಸಿ ಅವರು ಕಾರನ್ನು ಓಡಿಸುತ್ತಿದ್ದ ಸಂದರ್ಭದಲ್ಲಿ ನಾಪಾ ಕೌಂಟಿಯಲ್ಲಿ ಜೀಪ್ಗೆ ಡಿಕ್ಕಿ ಹೊಡೆದಿದ್ದರು ಎಂದು ಕ್ಯಾಲಿಫೋರ್ನಿಯಾ ಹೈವೇ ತಿಳಿಸಿದೆ. ಘಟನೆ ವೇಳೆ ಪೆಲೋಸಿ ಅವರ ರಕ್ತ ಪರೀಕ್ಷೆ ನಡೆಸಲಾಯಿತು. ಈ ವೇಳೆ ಶೇಕಡಾ 0.082 ರಷ್ಟು ರಕ್ತದಲ್ಲಿ ಆಲ್ಕೋಹಾಲ್ ಅಂಶ ಕಂಡುಬಂದಿದೆ ಎಂದು ನಾಪಾ ಕೌಂಟಿ ಜಿಲ್ಲಾ ವಕೀಲರ ಕಚೇರಿ ತಿಳಿಸಿದೆ. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಗಾಯ ಮಾಡಿಕೊಂಡಿರುವುದಾಗಿ ಪೆಲೋಸಿ ತಪ್ಪೊಪ್ಪಿಕೊಂಡಿದ್ದಾರೆ.
ನ್ಯಾನ್ಸಿ ಮತ್ತು ಪಾಲ್ ಪೆಲೋಸಿ 1963 ರಲ್ಲಿ ವಿವಾಹವಾದರು.
BIGG NEWS : ರಾಜ್ಯದಲ್ಲಿ ಈ ವರ್ಷ 4,300ಕ್ಕೂ ಹೆಚ್ಚು ವೈದ್ಯರ ನಿಯೋಜನೆ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್