ನಾಗ್ಪುರ: ಹಣಕಾಸಿನ ತೊಂದರೆಯಿಂದ ನಾಗ್ಪುರದಲ್ಲಿ ಉದ್ಯಮಿಯೊಬ್ಬರು ತನ್ನ ಕುಟುಂಬ ಸಮೇತ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ಉದ್ಯಮಿ ಸಾವನಪ್ಪಿದರೆ, ಅದೃಷ್ಟವಶಾತ್ ಆತನ ಪತ್ನಿ ಮತ್ತು ಮಗ ಕಾರಿನಿಂದ ಹೊರಬಂದು ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ
ನಾಗ್ಪುರದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಉದ್ಯಮಿಯನ್ನು 58 ವರ್ಷದ ರಾಮರಾಜ್ ಭಟ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಮತ್ತು ಮಗನಿಗೆ ಹೋಟೆಲ್ಗೆ ಊಟಕ್ಕೆ ಹೋಗುವುದಾಗಿ ಕರೆದುಕೊಂಡು ಬಂದಿದ್ದಾರೆ. ದಾರಿ ಮಧ್ಯೆ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ನಂತ್ರ, ಇದ್ದಕ್ಕಿದ್ದಂತೆ ರಾಮರಾಜ್ ತನ್ನ ಹಾಗೂ ಪತ್ನಿ, ಮಗನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ತೀವ್ರ ಸುಟ್ಟಗಾಯಗಳಿಂದ ರಾಮರಾಜ್ ಭಟ್ ಮೃತಪಟ್ಟಿದ್ದಾರೆ. ಅವರ ಪತ್ನಿ ಸಂಗೀತಾ ಭಟ್ ಮತ್ತು ಮಗ ನಂದನ್ ಹೇಗೋ ಕಾರಿನ ಬಾಗಿಲು ತೆರೆದು ಹೊರಗೆ ಜಿಗಿದಿದ್ದಾರೆ. ಆದ್ರೆ, ಅವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
मौत से भी डरावनी है आर्थिक तंगी !!
तभी तो आर्थिक तंगी से परेशान नागपुर के एक व्यक्ति ने परिवार सहित अपनी कार को ही आग लगा दी।
गनीमत है पत्नी और बेटा बच गए लेकिन परिवार के मुखिया रामराज भट्ट की मौत हो गई।@ndtvindia pic.twitter.com/uxKFBlr4ha— sunilkumar singh (@sunilcredible) July 20, 2022
ಸುದ್ದಿ ತಿಳಿಯುತ್ತಿದ್ದಂತೇ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಹೊತ್ತಿಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಸಿಕ್ಕ ಪ್ಲಾಸ್ಟಿಕ್ ಚೀಲದೊಳಗೆ ಪತ್ರವೊಂದು ಸಿಕ್ಕಿದೆ. ಅದರ ಪ್ರಕಾರ, ಆರ್ಥಿಕ ಮುಗ್ಗಟ್ಟಿನಿಂದ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
BIGG NEWS : ಡಿ.ಕೆ. ಶಿವಕುಮಾರ್ ಬಹಳ ವರ್ಷಗಳಿಂದ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ : ಸಿಎಂ ಬಸವರಾಜ ಬೊಮ್ಮಾಯಿ