ದಾವಣಗೆರೆ: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್ ೭ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಫುಲ್ ಅಲರ್ಟ್ ಆಗಿದೆ.
BIGG NEWS: ಹೊಸ ವರ್ಷಾಚರಣೆಯಲ್ಲಿ ರಾತ್ರಿ ಕುಡಿದು ಟೈಟಾದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ
ಈಗಾಗಲೇ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಕೊವೀಡ್ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಇದೀಗ ದಾಣಗರೆಯಲ್ಲಿ ಕೊವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ಕೊವಿಡ್ ಹಿನ್ನೆಲೆ ರಾಜ್ಯ ಸರ್ಕಾರದ ಮಾರ್ಗಸೂಚಿ ಬಂದ ಹಿನ್ನೆಲೆ ಡಿಸಿ ಶಿವಾನಂದ ಕಾಪಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 644 ಖಾಸಗಿ ಆಸ್ಪತ್ರೆ ಗಳಲ್ಲಿ 1088 ಬೆಡ್ ಗಳು ಲಭ್ಯವಿದೆ. 36 ಬಗೆಯ ಔಷಧಿಗಳು ಲಭ್ಯ.
BIGG NEWS: ಹೊಸ ವರ್ಷಾಚರಣೆಯಲ್ಲಿ ರಾತ್ರಿ ಕುಡಿದು ಟೈಟಾದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ
ಈಗಾಗಲೇ ಜಿಲ್ಲೆಯ ಶೇ.24ರಷ್ಟು ಜನರಿಗೆ ಬೂಸ್ಟರ್ ಡೋಸ್ ಆಗಿದೆ. ಇನ್ನೂ ಆರು ಲಕ್ಷ ಜನಕ್ಕೆ ಬೂಸ್ಟರ್ ಡೋಸ್ ಕೊಡಬೇಕಾಗಿದೆ ಎಂದು ಸಭೆ ಬಳಿಕ ಜಿಲ್ಲಾಧಿಕಾರಿ ಕಾಪಶಿ ಮಾಹಿತಿ ನೀಡಿದರು.
ಎನ್ 95 ಮಾಸ್ಕ್ ಹಾಕಲೇ ಬೇಕು. ಚಿತ್ರಮಂದಿರಗಳಿಗೆ ಹೋಗುವ ಪ್ರತಿಯೊಬ್ಬರು ಎನ್ 95 ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಸ್ಪಷ್ಟ ಉಲ್ಲೇಖವಿದೆ. ಪ್ರತಿ ಚಿತ್ರಮಂದಿರದ ಮಾಲೀಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಡಿಸಿ ಸೂಚನೆ.