ಮೈಸೂರು: ಆಗಸ್ಟ್ 13 ರಿಂದ 15 ರವರೆಗೆ ‘ಹರ್ ಘರ್ ತಿರಂಗ’ ಕಾರ್ಯಕ್ರಮದ ಅಂಗವಾಗಿ ಮೈಸೂರು ವಿಭಾಗದ ಸಿಬ್ಬಂದಿಗಳು ತಮ್ಮ ತಮ್ಮ ಮನೆಗಳಲ್ಲಿ ಹಾಗು ಮೈಸೂರು ವಿಭಾಗದಾದ್ಯಂತ ಇರುವ ಎಲ್ಲಾ 118 ರೈಲು ನಿಲ್ದಾಣಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು.
ಮೈಸೂರು ವಿಭಾಗದ ಸಿಬ್ಬಂದಿ ಶಾಖೆಯಿಂದ, ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೈಲ್ವೆ ನೌಕರರಿಗೆ ಸುಮಾರು 6500 ತ್ರಿವರ್ಣ ಧ್ವಜಗಳನ್ನು ವಿತರಿಸಲಾಯಿತು.
ಶಿವಮೊಗ್ಗ: ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಅಪಘಾತ ಸಂತ್ರಸ್ತ ಕುಟುಂಬಕ್ಕೆ 19 ಲಕ್ಷ ರೂ ಪರಿಹಾರದ ಚೆಕ್ ವಿತರಣೆ
ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರೈಲ್ವೆ ನಿಲ್ದಾಣಗಳಲ್ಲಿ ಘೋಷಣೆಗಳನ್ನು ಮಾಡಲಾಗುತ್ತಿದೆ. ‘ಹರ್ ಘರ್ ತಿರಂಗ’ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ವಿವಿಧ ರೈಲು ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಮೇಲಿನ ಪ್ರಯತ್ನಗಳ ಜೊತೆಯಲ್ಲಿ ಮೈಸೂರು ವಿಭಾಗದ 10 ಪ್ರಮುಖ ರೈಲು ನಿಲ್ದಾಣಗಳಾದ ಮೈಸೂರು, ಹಾಸನ, ಸುಬ್ರಹ್ಮಣ್ಯ ರೋಡ್, ಅರಸೀಕೆರೆ, ಶಿವಮೊಗ್ಗ ಟೌನ್, ದಾವಣಗೆರೆ, ಹರಿಹರ, ಚಿತ್ರದುರ್ಗ ಮತ್ತು ಮೈಸೂರಿನ ವಿಭಾಗೀಯ ಕಛೇರಿಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಮತ್ತು ‘ಹರ್ ಘರ್ ತಿರಂಗ’ದ ಕುರಿತಾದ ಸೆಲ್ಫಿ ಸ್ಟ್ಯಾಂಡ್ಗಳನ್ನು ಸ್ಥಾಪಿಸಲಾಗಿದೆ. ರೈಲ್ವೆ ಇಂಜಿನ್ಗಳು ಮತ್ತು ಬೋಗಿಗಳ ಮೇಲೆ ‘ಹರ್ ಘರ್ ತಿರಂಗ’ದ ಭಿತ್ತಿಪತ್ರಗಳನ್ನು ಕೂಡ ಅಂಟಿಸಲಾಗಿದೆ.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ನೆನೆಯಲು ಮತ್ತು ದೇಶದ ಬಾವುಟವನ್ನು ಮನೆಮನೆಗಳಲ್ಲಿ ಹಾರಿಸುವಂತೆ ಉತ್ತೇಜಿಸಲು ಭಾರತ ಸರ್ಕಾರವು ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರಾರಂಭಿಸಿದೆ. ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವುದು ಮತ್ತು ನಮ್ಮ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಈ ಉಪಕ್ರಮದ ಹಿಂದಿನ ಯೋಚನೆಯಾಗಿದೆ. ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದರ ಜೊತೆಗೆ, ಜನರು www.hargartiranga.com ನಲ್ಲಿ ಧ್ವಜವನ್ನು ಮಿತ್ಯವಾಗಿ ‘ಪಿನ್’ ಮಾಡಬಹುದು ಮತ್ತು ಅದೇ ಜಾಲದಲ್ಲಿ ಧ್ವಜದೊಂದಿಗಿನ ಸ್ವಯಂಚಿತ್ರವನ್ನು ‘ಪೋಸ್ಟ್’ ಮಾಡಬಹುದು.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಇಂದು ನೈಋತ್ಯ ರೈಲ್ವೆಯ ಮಹಿಳಾ ಕಲ್ಯಾಣ ಸಂಸ್ಥೆಯ ಸದಸ್ಯರು ಕೇಂದ್ರ ಸರ್ಕಾರ ಘೋಷಿಸಿರುವ ‘ಹರ್ ಘರ್ ತಿರಂಗ’ ಕಾರ್ಯಕ್ರಮವನ್ನು ಆಚರಿಸಲು ಮೈಸೂರು ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರವಾನಗಿ ಪಡೆದಿರುವ ರೈಲ್ವೆ ಸಹಾಯಕರು ಮತ್ತು ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುವ ಸ್ವಚ್ಛತಾ ಸಿಬ್ಬಂದಿಗಳಿಗೆ ಉಚಿತವಾಗಿ ರಾಷ್ಟ್ರಧ್ವಜಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಪೂಜಾ ಅಗರ್ವಾಲ್ ರವರು 13 ರಿಂದ 15 ರವರೆಗೆ ತಮ್ಮ ವಸತಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅನ್ನು ಆಚರಿಸಲು ಮತ್ತು ಅದರ ಮೂಲಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.