ಮೈಸೂರು: ದಸರಾ ಮಹೋತ್ಸವ 2022ರ ಕಾರ್ಯಕ್ರಮದಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದಂತ ವಿವಿಧ ಸ್ತಬ್ಧಚಿತ್ರಗಳಿಗೆ ಬಹುಮಾನದ ಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ. ಕೊಡಗು ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿದ್ದರೇ, ಚಿತ್ರದುರ್ಗ ಜಿಲ್ಲೆಗೆ ತೃತೀಯ ಸ್ಥಾನ ದೊರೆತಿದೆ.
‘ST ಸಮುದಾಯ’ದವರಿಗೆ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿ – ಸಿದ್ಧರಾಮಯ್ಯ ಆಗ್ರಹ
ಈ ಕುರಿತಂತೆ ಸ್ತಬ್ಧ ಚಿತ್ರ ಉಪಸಮಿತಿಯ ಉಪವಿಶೇಷಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 05-10-2022ರಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳನ್ನು ಪರಿಶೀಲಿಸಿ, ತೀರ್ಪು ನೀಡಲು ತೀರ್ಪುಗಾರರನ್ನು ನೇಮಿಸಲಾಗಿತ್ತು. ಅದರಂತೆ ವಿಜಯ ದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಸ್ತಬ್ಧಚಿತ್ರಗಳನ್ನು ತೀರ್ಪುಗಾರರು ಪರಿಶೀಲಿಸಿ ಬಹುಮಾನ ವಿಜೇತ ಸ್ತಬ್ಧಚಿತ್ರಗಳನ್ನು ಈ ಕೆಳಕಂಡಂತೆ ಆಯ್ಕೆ ಮಾಡಿರೋದಾಗಿ ತಿಳಿಸಿದೆ.
ಪ್ರಥಮ ಬಹುಮಾನವನ್ನು ಕೊಡಗು ಜಿಲ್ಲೆಗೆ ಲಭಿಸಿದ್ದರೇ, ದ್ವಿತೀಯ ಬಹುಮಾನವನ್ನು ಮೈಸೂರು ಜಿಲ್ಲೆಯ ಸ್ತಬ್ಧ ಚಿತ್ರ ಪಡೆದಿದೆ. ಮೂರನೇ ಬಹುಮಾನವನ್ನು ಚಿತ್ರದುರ್ಗ ಜಿಲ್ಲೆಗೆ ಸಂದಿದೆ.
ಮೈಸೂರು ದಸರಾ ಜಂಬೂಸವಾರಿ ಪೋಟೋಗೆ ಮನಸೋದ ಪ್ರಧಾನಿ ಮೋದಿ: ಜನತೆಗೆ ಧನ್ಯವಾದ
ಇನ್ನೂ ಸಮಾಧಾನಕರ ಬಹುಮಾನಗಳಾಗಿ ಚಿಕ್ಕಮಗಳೂರು ಜಿಲ್ಲೆ, ತುಮಕೂರು ಜಿಲ್ಲೆ, ಸ್ತಬ್ಧಚಿತ್ರ ಉಪಸಮಿತಿಯ ಸೋಮನಾಥಪುರ ದೇವಾಲಯ, ವಿಜಯಪುರ ಜಿಲ್ಲೆ ಸ್ತಬ್ಧ ಚಿತ್ರಗಳು ಪಡೆದಿವೆ.
ನಿಗಮ, ಮಂಡಳಿ ಮತ್ತು ವಿವಿಧ ಇಲಾಖೆಗಳಿಂದ ಪ್ರದರ್ಶನಗೊಂಡಂತ ಸ್ತಬ್ಧ ಚಿತ್ರಗಳಲ್ಲಿ ಪ್ರಥಮ ಬಹುಮಾನವನ್ನು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಪಡೆದುಕೊಂಡಿದೆ. ದ್ವಿತೀಯ ಬಹುಮಾನ ಕೆಎಂಎಫ್ ನಂದಿನ ಕ್ಷೀರಧಾರೆ ಉತ್ಪನ್ನಗಳು ಹಾಗೂ ಮೂರನೇ ಬಹುಮಾನವನ್ನು ಲಿಡ್ಕರ್ ಉತ್ಪನ್ನಗಳು ಪಡೆದಿದೆ.