ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ( Mysore Dasara 2022 ) ಆಚರಣೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ಮೈಸೂರು ದಸರಾ ನಿಮಿತ್ತ ನಡೆಯುವಂತ ಜಂಬೂಸವಾರಿಯನ್ನು ಅಕ್ಟೋಬರ್ 5ರಂದು ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ.
ಕೌಂಟಿ ಚಾಂಪಿಯನ್ ಶಿಪ್ ಪಂದ್ಯದ ಸಸೆಕ್ಸ್ ಮಧ್ಯಂತರ ನಾಯಕನಾಗಿ ಚೇತೇಶ್ವರ್ ಪೂಜಾರ್ ನೇಮಕ | Cheteshwar Pujara
ಈ ಬಗ್ಗೆ ದಸರಾ ಮಹೋತ್ಸವ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರು, ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ವಿಶ್ವದಾದ್ಯಂತ ಪ್ರಚಾರ ಆಗುವಂತೆ ನೋಡಿಕೊಳ್ಳಲಾಗುತ್ತದೆ. ದಸರಾ ಬ್ರ್ಯಾಂಡ್ ಆಗಬೇಕು. ಆ ನಿಟ್ಟಿನಲ್ಲಿ ಪ್ರಚಾರ ಮಾಡಲಾಗುತ್ತದೆ ಎಂದರು.
‘ಬಿಎಂಟಿಸಿ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ‘ವಾಯುವಜ್ರ ಬಸ್’ ಸಂಚಾರ ಪುನರಾರಂಭ
ಇನ್ನೂ ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ. ಅಕ್ಟೋಬರ್ 5ರಂದು ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಯಲಿದೆ ಎಂಬುದಾಗಿ ಹೇಳಿದರು.
ಈ 8 ಅಪಾಯಕಾರಿ ಅಪ್ಲಿಕೇಶನ್ ಗಳು ನಿಮ್ಮ ಹಣ, ಡೇಟಾವನ್ನು ಕದಿಯುತ್ತವೆ.! ಕೂಡಲೇ ತೆಗೆದು ಹಾಕಿ | Dangerous Apps