ಮೈಸೂರು: ಜಿಲ್ಲೆಯ ಟಿ.ನರಸೀಪುರದ ಎಸ್.ಕೆಬ್ಬಹುಂಡಿ ಗ್ರಾಮ ಸೇರಿದಂತೆ ಇತರೆ ಗ್ರಾಮದ ಜನರ ನಿದ್ದೆ ಗೆಡಿಸಿದ್ದಂತ ನರರಾಕ್ಷಸ ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆಗೆ ಇಳಿಯಲಾಗಿದೆ. 11 ತಂಡದಿಂದ ಕಾರ್ಯಾಚರಣೆಗೆ ಇಳಿದಿರುವಂತ ಅರಣ್ಯ ಇಲಾಖೆ ಸಿಬ್ಬಂದಿಗಳು, ಸೆರೆ ಇಲ್ಲವೇ ಶೂಟ್ ಔಟ್ ಗೂ ರೆಡಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದಂತ ಮೈಸೂರು ಅರಣ್ಯ ವೃತ್ತ ಸಿ ಎಫ್ ಮಾಲತಿಪ್ರಿಯ ಅವರು, ತಮ್ಮ ನೇತೃತ್ವದಲ್ಲಿ 11 ತಂಡದಿಂದ ನರರಾಕ್ಷಸ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಡ್ರೋನ್ ಮೂಲಕ ಚಿರತೆ ಎಲ್ಲಿದೆ ಎನ್ನುವುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಲಾಗಿದೆ ಎಂದರು.
ಕೆಜಿಎಫ್ ಚಿತ್ರದ ಹಾಡು ತೆರವುಗೊಳಿಸಿದ ವಿಚಾರ: ಹೈಕೋರ್ಟ್ ನಿಂದ ರಾಹುಲ್ ಗಾಂಧಿ ಸೇರಿ ಹಲವು ಕೈ ನಾಯಕರಿಗೆ ನೋಟಿಸ್
11 ತಂಡದಿಂದ ಸೆರೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪ್ರತಿ ತಂಡಕ್ಕೂ ಒಬ್ಬ ಮುಖ್ಯಸ್ಥ, ಮೂವರು ಶಾರ್ಪ್ ಶೂಟರ್ ನೇಮಿಸಲಾಗಿದೆ. ಚಿರತೆ ಶೂಟ್ ಔಟ್ ಮಾಡಬಹುದು ಎಂಬ ಆದೇಶ ಬಂದಿದೆ ಎಂದರು.
BREAKING: ಇಡಿಯಿಂದ ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ಉಪಕಾರ್ಯದರ್ಶಿ ಬಂಧನ
ಜಿಲ್ಲೆಯಲ್ಲಿನ ಟಿ ನರಸೀಪುರ ತಾಲೂಕಿನಲ್ಲಿ ಯುವಕನನ್ನು ಬಲಿ ಪಡೆದ ಚಿರತೆಗೂ, ನಿನ್ನೆ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಯುವತಿಯ ಮೇಲೆ ದಾಳಿ ನಡೆಸಿದಂತ ಚಿರತೆಗೂ ವ್ಯತ್ಯಾಸವಿದೆ. ಇದು ಚಿಕ್ಕ ವಯಸ್ಸಿನ ಚಿರತೆ ಎಂದು ಅಂದಾಜು ಮಾಡಲಾಗಿದೆ. ಸದ್ಯ 7 ಕಡೆ ಕ್ಯಾಮರಾ ಟ್ರ್ಯಾಪ್ ಅಳವಡಿಸಿದ್ದೇವೆ. ಚಿರತೆ ತನ್ನ ಮರಿಯೊಂದಿಗೆ ಓಡಾಡುತ್ತಿರುವ ಬಗ್ಗೆಯೂ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
Job Alert: ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ