ಬೆಂಗಳೂರು: ರಾಜ್ಯ ಸರ್ಕಾರದ ( Karnataka Government ) ಶಾಲಾ ಪಠ್ಯಪುಸ್ತಕ ವಿವಾದ ( textbook controversy ) ಮರೆಯಾಗೋ ಮುನ್ನವೇ, ಈಗ ಮೈಸೂರು ವಿವಿಯ ಪಠ್ಯಪುಸ್ತಕ ವಿವಾದ ಹೊರಬಿದ್ದಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಕಟಿಸಿರುವಂತ ಪಠ್ಯಪುಸ್ತಕದಲ್ಲಿ ಏಡ್ಸ್, ಕ್ಯಾನ್ಸರ್ ಗೆ ಸ್ವಮೂತ್ರಪಾನವೇ ಮದ್ದು ಎಂಬುದಾಗಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
BIG BREAKING NEWS: ರಾಜ್ಯ ಸರ್ಕಾರದಿಂದ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ತಡೆ
ಮೈಸೂರು ವಿಶ್ವವಿದ್ಯಾನಿಲಯದ ಪದವಿ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕವನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಇಡಲಾಗಿದೆ. ಹೀಗೆ ಇಟ್ಟಿರುವಂತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿನ ಪಠ್ಯದಲ್ಲಿ ಮೂತ್ರ ಚಿಕಿತ್ಸೆಯ ಬಗ್ಗೆ ವಿವರಣೆಯನ್ನು ನೀಡಲಾಗಿದೆ.
ಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಭಾಗ. ಪ್ರಕೃತಿಯು ರೋಗನಿರೋಧಕ ಶಕ್ತಿಯನ್ನು ಮನುಷ್ಯನಿಗೆ ಆತನ ದೇಹದಲ್ಲಿಯೇ ಒದಗಿಸುತ್ತದೆ. ಅಂದರೇ ಮೂತ್ರ. ಸಹಸ್ತಾರು ವರ್ಷಗಳಿಂದ ಯೋಗಿಗಳು ಮೂರ್ತ ಸೇವಿಸುತ್ತಿದ್ದರು ಎಂಬ ವಿಚಾರವಿದೆ. ಸಂಸ್ಕೃತ ಸಾಹಿತ್ಯ ನಿಧಿಯಲ್ಲಿ ಶಿವಾಂಬು ಸಂಹಿತೆಯಲ್ಲಿ ಈ ಬಗ್ಗೆ ಮಾಹಿತಿ ಇದೆ ಎಂದು ಹೇಳಲಾಗಿದೆ.
ಇದಲ್ಲದೇ ಬೈಬಲ್ ಗ್ರಂಧದಲ್ಲಿ ನಿಮ್ಮ ಆರೋಗ್ಯ ರಕ್ಷಣೆಗಾಗಿ ನಿಮ್ಮ ದೇಹವನ್ನೇ ಅವಲಂಬಿಸಿ ಎಂಬ ಉಲ್ಲೇಖವಿದೆ. ಆರ್ಮ್ ಸ್ಟ್ರಾಂಗ್ ಅವರು ಬರೆದಿರುವಂತ ವಾಟರ್ ಆಫ್ ಲೈಫ್ ಎಂಬ ಪುಸ್ತಕದಲ್ಲಿ ಬಗ್ಗೆ ವಿವರಣೆ ಇದೆ ಎಂದಿದೆ.
ಈ ಬಳಿಕ ಹೇಳುವಂತ ವಿವರಣೆಯಲ್ಲಿ ಮೂತ್ರ ಚಿಕಿತ್ಸೆಯಿಂದ ಅಂದರೇ ಸ್ವಮೂರ್ತ ಪಾನ ಮತ್ತು ಲೇಪನದಿಂದ ಸಿಹಿಮೂತ್ರದಿಂದ ಏಡ್ಸ್, ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಚರ್ಮರೋಗಗಳನ್ನು ನಿಯಂತ್ರಿಸ ಬಹುದಾಗಿದೆ ಎಂಬ ವಿಚಾರವಿದೆ. ಭಾರತದ ದಿವಂಗತ ಪ್ರಧಾನಮಂತ್ರಿ ಮೂರಾರ್ಜಿ ದೇಸಾಯಿಯವರು ಈ ಪದ್ದತಿಯನ್ನು ಅನುಸರಿಸುತ್ತಿದ್ದರು ಎಂಬುದು ಗಮನಾರ್ಹವಾದುದು ಎಂದು ಹೇಳಿರುವಂತದ್ದು ವಿವಾದಕ್ಕೆ ಕಾರಣವಾಗಿದೆ.
ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬಾಂಗ್ಲಾದಲ್ಲೊಂದು ಘಟನೆ: ಪ್ರೇಯಸಿಯನ್ನು ತುಂಡರಿಸಿ ಚರಂಡಿಗೆ ಎಸೆದ ಪಾಪಿ
ಇನ್ನೂ ವೈದ್ಯಕೀಯ ಸಮಾಜಶಾಸ್ತ್ರ ಎನ್ನುವಂತ ಈ ಪುಸ್ತಕವನ್ನು ಪ್ರೊ.ಕೆ ಭೈರಪ್ಪ ಅವರ ಬರೆದಿದ್ದಾಗಿದೆ. ಇದನ್ನು ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ ಐದನೇ ಸೆಮಿಸ್ಟರ್ ನೂತನ ಪಠ್ಯಕ್ರಮದಂತೆ ರಾಜ್ಯದ ಇತರ ವಿವಿಗಳ ಸೆಮಿಸ್ಟರ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದದ್ದು ಎಂದು ಹೇಳಲಾಗಿದೆ.