ಮೈಸೂರು : ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಟಾರ್ಚನೆ ಮಾಡುವ ಮೂಲಕ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ್ದು, ಮೈಸೂರಿನದಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ.
ರಾಜ್ಯದಲ್ಲಿ ದಸರಾ ಹಬ್ಬದ ಆಚರಣೆ ಜೋರಾಗಿದ್ದು, . ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.ವಿಶ್ವವಿಖ್ಯಾತ ಮೈಸೂರು ದಸರಾ 2022 ಹಿನ್ನೆಲೆ ಈ ಬಾರಿ 41 ಸ್ತಬ್ದಚಿತ್ರಗಳಿಗೆ ಅವಕಾಶ ನೀಡಲಾಗಿದೆ.
ಪ್ರತಿ ಜಿಲ್ಲೆಯ ಒಂದು ಸ್ತಬ್ದಚಿತ್ರ. ಸ್ತಬ್ದಚಿತ್ರ ಉಪಸಮಿತಿಯಿಂದ 03, ಮೈಸೂರು ವಿವಿ 01, ಚೆಸ್ಕಾಂ 01, ಸಮಾಜ ಕಲ್ಯಾಣ ಇಲಾಖೆ 01, ಪ್ರವಾಸೋದ್ಯಮ ಇಲಾಖೆ 01, ಲಿಡಕರ್ 01, ಕೌಶಲ್ಯ ಕರ್ನಾಟಕ 01, ಕೆಎಂಎಫ್ 01, ಕಾವೇರಿ ನೀರಾವರಿ ನಿಗಮದ ಒಂದು ಸ್ತಬ್ಧಚಿತ್ರ, ಆಜಾದಿ ಕಾ ಅಮೃತ ಮಹೋತ್ಸವ ಸಾರುವ ಸ್ತಬ್ದಚಿತ್ರ ಸೇರಿ ಹಲವು ಸ್ತಬ್ದಚಿತ್ರಗಳು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರ ಗಮನ ಸೆಳೆಯಲಿದೆ.