ವಿಜಯಪುರ: ನಾನು ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ. ನನ್ನ ಸ್ಪರ್ಧೆ ಖಚಿತವಾಗಿದ್ದು, ಗೆಲುವು ಕೂಡ ಅಷ್ಟೇ ನಿಶ್ಚಿತವಾಗಿದೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನನ್ನ ಹೆಸರು ಬಿಜೆಪಿ ನಿಷ್ಠಾವಂತರ ಗುಂಪಿನ ಕೋರ್ ಕಮಿಟಿಯಲ್ಲಿ ಅಂತಿಮ ಆದ್ರೆ ಸ್ಪರ್ಧಿಸೋದು ಖಚಿತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ರೆಡಿ ಎಂಬುದಾಗಿ ತಿಳಿಸಿದರು.
ನಾನು ಬಿಜೆಪಿ ಉಸ್ತುವಾರಿ ಸಭೆಗೆ ಹೋಗಿಲ್ಲ. ಅಲ್ಲಿ 600 ಶಾಸಕರ ಬೆಂಬಲ ಇದೆ. ಅಲ್ಲಿಗೆ ನಮಗೇನು ಕೆಲಸ. 600 ಶಾಸಕರು, 1,500 ಸಂಸದರು, 2000 ಎಂಎಲ್ಸಿಗಳ ಬೆಂಬಲ ಇದೆ ಎಂಬುದಾಗಿ ವ್ಯಂಗ್ಯವಾಡಿದರು.
ನಾನು ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸೋದು ಖಚಿತ. ಅಷ್ಟೇ ಅಲ್ಲದೇ ನಾನು ಸ್ಪರ್ಧಿಸಿ ಗೆಲುವು ಕೂಡ ಸಾಧಿಸಲಿದ್ದೇನೆ ಎಂಬುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು.