ಪಾಟ್ನಾ: ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.
ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ನಂಬಿಕೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಇದೀಗ ಪಾಸ್ವಾನ್ ವಿರುದ್ಧ ಭಾಗಲ್ಪುರದ ಶೆರ್ಮರಿ ಬಜಾರ್ನಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಅವರ ಪ್ರತಿಕೃತಿಯನ್ನು ಸುಡಲಾಗಿದೆ.
ಪಾಸ್ವಾನ್ ಅವರು ದೀಪಾವಳಿಯಂದು ಲಕ್ಷ್ಮಿ ದೇವಿಯ ಆರಾಧನೆಯನ್ನು ಪ್ರಶ್ನಿಸಿದ್ದಾರೆ. “ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುತ್ತಿದ್ದರೆ ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳು ಇರುತ್ತಿರಲಿಲ್ಲ, ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ ಅವರು ಶ್ರೀಮಂತರಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ, ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ? ಅವರು IAS ಅಥವಾ IPS ಆಗುವುದಿಲ್ಲವೇ?” ಎಂದು ಶಾಸಕರು ಪ್ರಶ್ನಿಸಿದ್ದು, “ಆತ್ಮ ಮತ್ತು ಪರಮಾತ್ಮ” ಪರಿಕಲ್ಪನೆಯು ಕೇವಲ ಜನರ ನಂಬಿಕೆಯಾಗಿದೆ ಎಂದಿದ್ದಾರೆ.
“मुसलमान लक्ष्मी की पूजा नहीं करते, तो क्या वे अमीर नहीं होते”
“मुसलमान सरस्वती को नहीं पूजते, तो क्या मुसलमान शिक्षित नहीं होते” – BJP MLA Lalan Paswan from Bhagalpur,Bihar pic.twitter.com/RDoSM0jMEY— Muktanshu (@muktanshu) October 19, 2022
ನೀವು ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹ. ನಾವು ದೇವರು ಮತ್ತು ದೇವತೆಗಳನ್ನು ನಂಬುತ್ತೇವೆಯೇ ಅಥವಾ ನಂಬುವುದಿಲ್ಲವೇ ಎಂಬುದು ನಮಗೆ ಬಿಟ್ಟದ್ದು, ನಾವು ಅದನ್ನು ತಲುಪಲು ವೈಜ್ಞಾನಿಕ ತಳಹದಿಯ ಮೇಲೆ ಯೋಚಿಸಬೇಕು ಎಂದು ಹೇಳಿದರು. ತಾರ್ಕಿಕ ತೀರ್ಮಾನ, ನೀವು ನಂಬುವುದನ್ನು ನಿಲ್ಲಿಸಿದರೆ, ನಿಮ್ಮ ಬೌದ್ಧಿಕ ಸಾಮರ್ಥ್ಯವು ಹೆಚ್ಚಾಗುತ್ತದೆ ಎಂದಿದ್ದಾರೆ.
“ಬಜರಂಗಬಲಿ ಶಕ್ತಿಯುಳ್ಳ ದೇವತೆ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಬಜರಂಗಬಲಿಯನ್ನು ಪೂಜಿಸುವುದಿಲ್ಲ. ಅವರು ಶಕ್ತಿಶಾಲಿಗಳಲ್ಲವೇ? ನೀವು ನಂಬುವುದನ್ನು ನಿಲ್ಲಿಸಿದ ದಿನ, ಈ ಎಲ್ಲಾ ವಿಷಯಗಳು ಕೊನೆಗೊಳ್ಳುತ್ತವೆ” ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.
ಬೀಜಿಂಗ್ನಲ್ಲಿ ಕೋವಿಡ್-19 ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಳ : ಮತ್ತೆ ಲಾಕ್ಡೌನ್ ಹೇರಿದ ಚೀನಾ