ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಮಹತ್ವದ ಟ್ವಿಸ್ಟ್ ಸಿಗುತ್ತಿದೆ. ಸದ್ಯ,, ಮೈಸೂರಿನ ಒಡನಾಡಿ ಸಂಸ್ಥೆಗೆ ಭೇಟಿ ನೀಡಿದ ಪೊಲೀಸರು ನಾಲ್ವರು ಸಿಬ್ಬಂದಿಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಮೈಸೂರಿನ ಒಡನಾಡಿ ಸಂಸ್ಥೆಯ ನಾಲ್ವರು ಸಿಬ್ಬಂದಿಗಳನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಗೆ ಭೇಟಿ ನೀಡಿದ ಚಿತ್ರದುರ್ಗ ಪೊಲೀಸರು ನಾಲ್ವರು ಸಿಬ್ಬಂದಿಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.
ಇನ್ನೂ, ಕೇವಲ ಮುರುಘಾ ಶರಣರು ಮಾತ್ರವಲ್ಲ ಅವರ ಕೆಳ ಹಂತದವರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಪರಶುರಾಮ್ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.
ಶರಣರು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಮೇಲೆ ಅವರ ಕೆಳ ಹಂತದಲ್ಲಿ ಗುರು ಸ್ಥಾನದಲ್ಲಿರೋ ವ್ಯಕ್ತಿಯೂ ಮಕ್ಕಳನ್ನು ತಮ್ಮ ಕಾಮಕ್ಕೆ ಬಳಸಿದ್ದಾರೆ. ಆ ವ್ಯಕ್ತಿಯನ್ನು ಬುದ್ದಿ ಎಂದು ಕರೆಯಲಾಗುತ್ತೆ. ಅವರ ನಂತರ, ಮಠದ ಕೆಲವು ನೌಕರರು, ಅಧಿಕಾರಿಗಳು ಕೂಡ ಮಕ್ಕಳನ್ನು ಲೈಂಗಿಕವಾಗಿ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಡುಮೃಗ ಬೇಟೆಯಾಡಿ ಬಿಟ್ಟು ಹೋದ ಮಾಂಸವನ್ನು ಬೇರೆ ಪ್ರಾಣಿಗಳು ತಿನ್ನುವ ರೀತಿ ಈ ಪ್ರಕ್ರಿಯೆ ನಡೆದಿದೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. ಹೀಗಾಗಿ ಪ್ರಕರಣವನ್ನು ಸಿಬಿಐ ಗೆ ವಹಿಸಿ ಎಂದು ಆಗ್ರಹಿಸಿದ್ದಾರೆ.ನಿನ್ನೆ ಬಿಡುಗಡೆ ಆಗಿರೋ ಆಡಿಯೋ ಆರು ತಿಂಗಳ ಹಿಂದಿನದೂ ಅದಕ್ಕೂ ನಮಗೂ ಸಂಬಂಧವಿಲ್ಲ. ಈ ಬಗ್ಗೆ ನಾವು ಯಾವ ತನಿಖೆಗೆ ಬೇಕಾದರೂ ಸಿದ್ಧ ಎಂದ ಅವರು, ಮುರುಘಾ ಶರಣರಿಗೆ ಮದ್ಯ ತಂದು ಕೊಡುತ್ತಿದ್ದವರು ಯಾರು? ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಯಾರು ಎಂಬುದು ಪತ್ತೆ ಆಗಬೇಕು ಎಂದಿದ್ದಾರೆ.