ಬೆಂಗಳೂರು: ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ ನೇಮಕವನ್ನು ಮಾಡಲಾಗುವುದು ಅಂತ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಅವರು ಮಾತನಾಡುತ್ತ, ಮಠದ ಭಕ್ತರು, ಮಾಜಿ ಶಾಸಕರ ನಿಯೋಗ ನನ್ನನ್ನು ಭೇಟಿ ಮಾಡಿ ಮಾಡಿ ಆಡಳಿತ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ತಿಳಿಸಿದ್ದು, ಟ್ರಸ್ಟ್ ಅನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕಾನೂನು ಪ್ರಕಾರ ಏನೆಲ್ಲ ಅವಕಾಶ ಇದೆ ಅದನ್ನ ಚರ್ಚೆ ಮಾಡಿದ ಬಳಿಕ, ಎಲ್ಲವನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನಡೆಯಲಿದೆ ಅಂತ ತಿಳಿಸಿದರು.
BREAKING NEWS: ಮುರುಘಾಶ್ರೀಗಳಿಂದ ‘ಪವರ್ ಆಫ್ ಅಟರ್ನಿ’ ನಿವೃತ್ತ ನ್ಯಾ.ಎಸ್.ಬಿ ವಸ್ತ್ರದಮಠ್ ಗೆ ಹಸ್ತಾಂತರ | Murugha Sri
ಚಿತ್ರದುರ್ಗ: ಮುರುಘಾ ಶ್ರೀಗಳ ( Murugha Sri ) ವಿರುದ್ಧ ಮತ್ತಿಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮತ್ತೊಂದು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿರೋ ಸಂದರ್ಭದಲ್ಲಿ ಮಠದಲ್ಲಿ ಹೆಣ್ಣುಮಗುವೊಂದು ಸಿಕ್ಕಿದ್ದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮುರುಘಾಶ್ರೀಗಳಿಂದ ತಮ್ಮ ಬಳಿಯಿದ್ದಂತ ಪವರ್ ಆಪ್ ಅಟರ್ನಿಯನ್ನು ( Power of Attorney ) ಹಸ್ತಾಂತರಿಸಲಾಗಿದೆ.
ಮುರುಘಾ ಶಿವಶರಣರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿದ ಬಳಿಕ, ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ನ್ಯಾಯಮೂರ್ತಿ ಎಸ್ ಬಿ ವಸ್ತ್ರದಮಠ್ ಅವರನ್ನು ನೇಮಕ ಮಾಡಲಾಗಿತ್ತು. ಅವರೀಗ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಬಳಿಕ, ಮುರುಘಾಶ್ರೀಗಳ ಬಳಿಯಲ್ಲಿದ್ದಂತ ಪವರ್ ಆಪ್ ಅಟರ್ನಿಯ ಕಾರಣದಿಂದಾಗಿ ವಿವಿಧ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿತ್ತು. ಹೀಗಾಗಿ ಇಂದು ಅಧಿಕೃತವಾಗಿ ಮುರುಘಾ ಶ್ರೀಗಳು ನೋಟರಿ ಮಾಡಿಸಿ, ತಮ್ಮ ಬಳಿಯಲ್ಲಿದ್ದಂತ ಪವರ್ ಆಪ್ ಅಟರ್ನಿಯನ್ನು ನಿವೃತ್ತ ನ್ಯಾಯಧೀಶ ಎಸ್ ಬಿ ವಸ್ತ್ರದಮಠ್ ಗೆ ಹಸ್ತಾಂತರಿಸಿದ್ದಾರೆ.