ಮುಂಬೈ: ಆಕಸ್ಮಿಕವಾಗಿ ಇಲಿ ವಿಷ ಬೆರೆಸಿದ ಆಹಾರವನ್ನು ಸೇವಿಸಿ 27 ವರ್ಷದ ಮಹಿಳೆಯೊಬ್ಬರು ಮುಂಬೈನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮ್ಯಾಗಿ ತಯಾರಿಸುವಾಗ ಮಹಿಳೆ ಆಕಸ್ಮಿಕವಾಗಿ ಇಲಿ ವಿಷ ಬೆರೆಸಿದ ಟೊಮೆಟೊವನ್ನು ಹಾಕಿದ್ದಳು ಎನ್ನಲಾಗುತ್ತಿದೆ.
ಮುಂಬೈನ ಮಲಾಡ್ನ ಪಾಸ್ಕಲ್ ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜುಲೈ 21 ರಂದು ಮಹಿಳೆ ರೇಖಾ ನಿಶಾದ್ ಎಂಬಾಕೆ ಮನೆಯಲ್ಲಿ ಇಲಿಗಳನ್ನು ಕೊಲ್ಲಲು ಟೊಮೆಟೊ ಲೇಸ್ ಮಾಡಿದ್ದಳು.ಟಿವಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ಟೊಮೇಟೊವನ್ನು ತನ್ನ ಆಹಾರಕ್ಕೆ ಸೇರಿಸಿಕೊಂಡಿದ್ದಾಳೆ ಎಂದು ಮಾಲ್ವಾನಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೂಸಾ ದೇವರ್ಶಿ ಹೇಳಿದ್ದಾರೆ.
ಮ್ಯಾಗಿ ತಿಂದ ಕೆಲವೇ ಗಂಟೆಗಳಲ್ಲಿ ವಾಂತಿಯಾಗತೊಡಗಿದಳು. ಆಕೆಯ ಪತಿ ಮತ್ತು ಸೋದರಮಾವ ಅವಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.