ಮುಂಬೈ : ನಿನ್ನೆ ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಸಿಇಒ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೆ ಮತ್ತೊಮ್ಮೆ ಕೊಲೆ ಬೆದರಿಕೆ ಬಂದಿತ್ತು. ಈ ಬಗ್ಗೆ ತಕ್ಷಣವೇ ತನಿಖೆ ಪ್ರಾರಂಭಿಸಿದ್ದ ಮುಂಬೈ ಪೊಲೀಸರ ತಂಡವು ಇದೀಗ ಬಿಹಾರ ಪೊಲೀಸರ ಸಹಾಯದಿಂದ ಬಿಹಾರದ ದರ್ಭಾಂಗದಲ್ಲಿ ವ್ಯಕ್ತಿಯೊಬ್ಬನನ್ನು ಮಧ್ಯರಾತ್ರಿ ಬಂಧಿಸಿದೆ.
ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ರಿಲಯನ್ಸ್ ಫೌಂಡೇಶನ್ ಕಚೇರಿಗೆ ಕರೆ ಮಾಡಿ ಅಂಬಾನಿ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದ. ಈ ಕರೆ ಮೂಲಕ ರಿಲಯನ್ಸ್ ಆಸ್ಪತ್ರೆಗೆ ಬಾಂಬ್ ಸ್ಫೋಟದ ಬೆದರಿಕೆ ಹಾಕಲಾಗಿದೆ. ಅಲ್ಲದೇ, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಗೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಈ ವೇಳೆ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ಸಂಬಂಧ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ರಾಜೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ಆರೋಪಿಯ ಜತೆ ಪೊಲೀಸರ ತಂಡ ಮುಂಬೈಗೆ ವಾಪಸಾಗುತ್ತಿದೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ಹಿಂದೆಯೂ ಕೊಲೆ ಬೆದರಿಕೆ ಬಂದಿತ್ತು
ಆಗಸ್ಟ್ 15 ರಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಇದೇ ರೀತಿಯ ಕರೆ ಮಾಡಲಾಗಿತ್ತು. ವರದಿಗಳ ಪ್ರಕಾರ, ವ್ಯಕ್ತಿಯು ಆಸ್ಪತ್ರೆಯ ಡಿಸ್ಪ್ಲೇ ಸಂಖ್ಯೆಗೆ ಎಂಟು ಬಾರಿ ಕರೆ ಮಾಡಿ, ಮುಖೇಶ್ ಅಂಬಾನಿ ಅವರ ಜೀವಕ್ಕೆ ಬೆದರಿಕೆ ಹಾಕಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಬೆದರಿಕೆ ಕರೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮುಂಬೈನ ಪಶ್ಚಿಮ ಉಪನಗರದಲ್ಲಿ ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಗೃಹ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ಮುಖೇಶ್ ಅಂಬಾನಿ ಅವರ ಭದ್ರತೆಯನ್ನು Z+ ವರ್ಗಕ್ಕೆ ಮೇಲ್ದರ್ಜೆಗೇರಿಸಿದೆ. ಈ ಹಿಂದೆ ಅವರಿಗೆ ಝಡ್ ವರ್ಗದ ಭದ್ರತೆಯನ್ನು ನೀಡಲಾಗಿತ್ತು. ಇದರಲ್ಲಿ ಪೈಲಟ್ ಮತ್ತು ಫಾಲೋ-ಅಪ್ ವಾಹನಗಳನ್ನು ಸಶಸ್ತ್ರ ಕಮಾಂಡೋಗಳು ಒಳಗೊಂಡಿದ್ದು, ಅವರು ಭಾರತದಲ್ಲಿ ಎಲ್ಲಿಯಾದರೂ ತೆರಳಿದಾಗ ಅವರಿಗೆ ಭದ್ರತೆಯನ್ನು ಒದಗಿಸುತ್ತಾರೆ.
ಕಳೆದ ವರ್ಷ, ಮುಕೇಶ್ ಅಂಬಾನಿ ಅವರ ಮುಂಬೈನ ಮನೆ ‘ಆಂಟಿಲಿಯಾ’ ಹೊರಗೆ 20 ಸ್ಫೋಟಕ ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರವನ್ನು ಹೊಂದಿರುವ ಸ್ಕಾರ್ಪಿಯೋ ಸೆಡಾನ್ ಪತ್ತೆಯಾಗಿತ್ತು.
BIG NEWS: ಭಾರತ ಮೂಲದ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವು: ತನಿಖೆಗೆ ಆದೇಶಿಸಿದ WHO
BIGG NEWS: ಶರಣರ ನಾಡಿನಲ್ಲಿ ಮತ್ತೆ ರಕ್ತಪಾತ; ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕ ಬರ್ಬರ ಹತ್ಯೆ