Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ ಶಾಮನೂರು ಪ್ರಮಾಣವಚನ ಸ್ವೀಕಾರ

BIG NEWS : ಬರಡು ಭೂಮಿಗೆ ಗಂಗೆ ಹರಿಸಿದ ‘ಗೃಹಲಕ್ಷ್ಮಿ’ : ಹೊಲದಲ್ಲಿ ಬೋರ್ವೆಲ್ ಕೊರೆಸಿ ಇತರರಿಗೆ ಮಾದರಿಯಾದ ಮಹಿಳೆ!

ಒತ್ತುವರಿಯಾದ ನಿಮ್ಮ ಜಮೀನು ಕಾನೂನು ಪ್ರಕಾರ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ 13ನೇ ಜಾಗತಿಕ ಟಿ20 ಪ್ರಶಸ್ತಿ
SPORTS

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ 13ನೇ ಜಾಗತಿಕ ಟಿ20 ಪ್ರಶಸ್ತಿ

By ವಸಂತ ಬಿ ಈಶ್ವರಗೆರೆ

ಮುಂಬೈ: ಎಂಐ ನ್ಯೂಯಾರ್ಕ್ ತಂಡ 2025ರ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್ಸಿ) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಅಮೆರಿಕದ ಪ್ರಮುಖ ಟಿ20 ಟೂರ್ನಿಯ ಕೇವಲ ಮೂರು ಆವೃತ್ತಿಗಳಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟವೇರಿದ ಸಾಧನೆ ಮಾಡಿದೆ. ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ಜಾಗತಿಕವಾಗಿ ಒಲಿದ 13ನೇ ಪ್ರಮುಖ ಟಿ20 ಪ್ರಶಸ್ತಿ ಇದಾಗಿದೆ ಮತ್ತು 2025ರಲ್ಲಿ ಗೆದ್ದ ಮೂರನೇ ಟ್ರೋಫಿಯಾಗಿದೆ.

ಎಂಐ ನ್ಯೂಯಾರ್ಕ್ ತಂಡ ಭಾನುವಾರ ರಾತ್ರಿ ಡಲ್ಲಾಸ್ನಲ್ಲಿ ನಡೆದ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಂಐ ನ್ಯೂಯಾರ್ಕ್ ತಂಡ ಕ್ವಿಂಟನ್ ಡಿಕಾಕ್ (77 ರನ್, 46 ಎಸೆತ, 6 ಬೌಂಡರಿ, 4 ಸಿಕ್ಸರ್) ಬಿರುಸಿನ ಅರ್ಧಶತಕದಾಟದಿಂದ 7 ವಿಕೆಟ್ಗೆ 180 ರನ್ ಕಲೆಹಾಕಿತು. ಪ್ರತಿಯಾಗಿ ವಾಷಿಂಗ್ಟನ್ ಫ್ರೀಡಂ ಪರ ರಚಿನ್ ರವೀಂದ್ರ (70) ಮತ್ತು ಗ್ಲೆನ್ ಫಿಲಿಪ್ಸ್ (48*) ಹೋರಾಟ ನಡೆಸಿದರು. ಆದರೆ ಕೊನೇ ಓವರ್ನಲ್ಲಿ ವಾಷಿಂಗ್ಟನ್ಗೆ 12 ರನ್ ಬೇಕಿದ್ದಾಗ ಯುವ ಮಧ್ಯಮ ವೇಗಿ ರುಶಿಲ್ ಉಗರ್ಕರ್ 6 ರನ್ ಮಾತ್ರ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದರು. ಇದರಿಂದ ವಾಷಿಂಗ್ಟನ್ ಫ್ರೀಡಂ 5 ವಿಕೆಟ್ಗೆ 175 ರನ್ ಗಳಿಸಲಷ್ಟೇ ಶಕ್ತಗೊಂಡರೆ, ಎಂಐ ನ್ಯೂಯಾರ್ಕ್ ತಂಡ 5 ರನ್ಗಳಿಂದ ರೋಚಕ ಗೆಲುವು ದಾಖಲಿಸಿತು. ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲಿ 6ರಲ್ಲಿ ಸೋತಿದ್ದ ಎಂಐ ನ್ಯೂಯಾರ್ಕ್ ತಂಡ ನಂತರದಲ್ಲಿ ಪುಟಿದೆದ್ದಿತ್ತು. 4ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿದ್ದ ನಿಕೋಲಸ್ ಪೂರನ್ ನಾಯಕತ್ವದ ಎಂಐ ನ್ಯೂಯಾರ್ಕ್, ಸತತ 3 ಜಯದೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿರುವುದು ವಿಶೇಷವಾಗಿದೆ.

ಹಾಲಿ ವರ್ಷ ಎಂಐ ತಂಡಗಳು ಮೂರು ಖಂಡಗಳಲ್ಲಿನ ಐದು ಲೀಗ್‌ಗಳಲ್ಲಿ ಸ್ಪರ್ಧಿಸಿ, ಎಲ್ಲಾ ಐದರಲ್ಲೂ ಪ್ಲೇಆಫ್‌ ಪ್ರವೇಶಿಸಿದವು ಮತ್ತು ಮೂರರಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿವೆ. ಈ ಮುನ್ನ ಎಂಐ ಕೇಪ್ಟೌನ್‌ ತಂಡ ದಕ್ಷಿಣ ಆಫ್ರಿಕಾದ ಎಸ್ಎ20 ಟೂರ್ನಿ ಮತ್ತು ಈ ವರ್ಷದ ಆರಂಭದಲ್ಲಿ ಡಬ್ಲ್ಯುಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು.
‘ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಿಜವಾಗಿಯೂ ಎಂತಹ ವಿಶೇಷ ಕ್ಷಣ. ಇದು ಕೇವಲ ಮೈದಾನದ ಗೆಲುವಲ್ಲ, ಇದು ಉತ್ಸಾಹ, ನಂಬಿಕೆ ಮತ್ತು ಸಂಘಟಿತ ಶಕ್ತಿಯ ಸಂಭಮವಾಗಿದೆ. ಆಚರಣೆಯಾಗಿದೆ. ನಮ್ಮ ಎಲ್ಲಾ ಅಭಿಮಾನಿಗಳಿಗೆ (ಎಂಐ ಪಾಲ್ಟನ್), ಯಾವಾಗಲೂ ನಮ್ಮೊಂದಿಗೆ ನಿಂತಿರುವ ಮತ್ತು ನಮ್ಮ ಪ್ರಯಾಣದ ಹೃದಯಭಾಗದಲ್ಲಿ ಇರುವವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಪ್ರತಿಯೊಬ್ಬ ಆಟಗಾರ, ತರಬೇತುದಾರ, ಬೆಂಬಲಿಗರು ಮತ್ತು ನಮ್ಮ ಜಾಗತಿಕ ಎಂಐ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ನನ್ನ ಅಭಿನಂದನೆಗಳು’ ಎಂದು ಶ್ರೀಮತಿ ನೀತಾ ಎಂ. ಅಂಬಾನಿ ಹೇಳಿದರು.

‘ಮುಂಬೈ ಇಂಡಿಯನ್ಸ್ ಭಾಗವಾಗಿರುವ ನಮಗೆಲ್ಲರಿಗೂ ಇದು ಹೆಮ್ಮೆಯ ಕ್ಷಣ. ಎಂಐ ನ್ಯೂಯಾರ್ಕ್ ಎರಡನೇ ಬಾರಿ ಎಂಎಲ್‌ಸಿ ಪ್ರಶಸ್ತಿ ಎತ್ತಿ ಹಿಡಿದಿರುವುದು ಅತ್ಯಂತ ತೃಪ್ತಿಕರ ಸಾಧನೆಯಾಗಿದೆ. ಈ ಯಶಸ್ಸು ನಮ್ಮ ತಂಡಗಳ ನಂಬಿಕೆ, ಸಂಸ್ಕೃತಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕ್ಷಣವನ್ನು ಸಾಧ್ಯವಾಗಿಸಿದ ಎಂಐ ನ್ಯೂಯಾರ್ಕ್‌ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆಗಳು’ ಎಂದು ಶ್ರೀ ಆಕಾಶ್ ಎಂ. ಅಂಬಾನಿ ಹೇಳಿದರು.

ಮುಂಬೈ ಇಂಡಿಯನ್ಸ್ ಜಾಗತಿಕ ಟಿ20 ಲೀಗ್‌ಗಳಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿದೆ. ಇದರ ಒಟ್ಟು 13 ಚಾಂಪಿಯನ್‌ಶಿಪ್ ಗೆಲುವುಗಳಲ್ಲಿ 5 ಐಪಿಎಲ್ ಪ್ರಶಸ್ತಿಗಳು, 2 ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಗಳು, 2 ಮೇಜರ್ ಲೀಗ್ ಕ್ರಿಕೆಟ್ ಪ್ರಶಸ್ತಿಗಳು, 2 ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳು ಮತ್ತು ತಲಾ ಒಂದು ಐಎಲ್‌ಟಿ20 (ಎಂಐ ಎಮಿರೇಟ್ಸ್, 2024) ಮತ್ತು ಎಸ್‌ಎ20 (ಎಂಐ ಕೇಪ್ ಟೌನ್, 2025) ಪ್ರಶಸ್ತಿಗಳು ಸೇರಿವೆ. ಮೂರು ಖಂಡಗಳು ಮತ್ತು ನಾಲ್ಕು ದೇಶಗಳಲ್ಲಿ ಒಟ್ಟು ಐದು ತಂಡಗಳನ್ನು ಎಂಐ ಫ್ರಾಂಚೈಸಿ ಹೊಂದಿದೆ.

BREAKING: ದೇಶದ 2ನೇ ಉದ್ದದ ಕೇಬಲ್ ಸೇತುವೆ ‘ಸಿಗಂದೂರು ಬ್ರಿಡ್ಜ್’ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ

ಸಿಗಂದೂರು ಸೇತುವೆಯನ್ನು ಕೇಂದ್ರ ಸಚಿವರು ಬಿಜೆಪಿ ಸ್ಥಳೀಯ ನಾಯಕರ ಒತ್ತಡಕ್ಕೆ ಮಣಿದು ಇಂದು ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ದಾಖಲೆ: 50 ಓವರ್‌ಗಳಲ್ಲಿ 822 ರನ್ ಸಿಡಿಸಿದ ಜಿಂಬಾಬ್ವೆ ಕ್ಲಬ್ | Zimbabwe Club

2 Mins Read
RCB vs SRH IPL 2026 Rajat Patidar vs Ishan Kishan Leadership Clash

ಐಪಿಎಲ್ 2026 : ಮುಂಬೈ ವಿರುದ್ಧ ಆರ್​​ಸಿಬಿಗೆ ರೋಚಕ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಹಾಲಿ ಚಾಂಪಿಯನ್ಸ್

3 Mins Read

Watch Video: ರೋಹಿತ್ ಶರ್ಮಾ ಅವರ 3.25 ಕೋಟಿ ರೂ. ಮೌಲ್ಯದ ವಾಚ್ ಕದಿಯಲು ಯತ್ನ: ಶಾಕಿಂಗ್ ವೀಡಿಯೋ ವೈರಲ್!

2 Mins Read
Recent News

ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ ಶಾಮನೂರು ಪ್ರಮಾಣವಚನ ಸ್ವೀಕಾರ

BIG NEWS : ಬರಡು ಭೂಮಿಗೆ ಗಂಗೆ ಹರಿಸಿದ ‘ಗೃಹಲಕ್ಷ್ಮಿ’ : ಹೊಲದಲ್ಲಿ ಬೋರ್ವೆಲ್ ಕೊರೆಸಿ ಇತರರಿಗೆ ಮಾದರಿಯಾದ ಮಹಿಳೆ!

ಒತ್ತುವರಿಯಾದ ನಿಮ್ಮ ಜಮೀನು ಕಾನೂನು ಪ್ರಕಾರ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

BREAKING : ಸಚಿವ ಸಂಪುಟ ಪುನಾರಚನೆ ಮಾಡ್ಬೇಕು, ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ : ಸುಳಿವು ನೀಡಿದ ಸಿಎಂ

State News
KARNATAKA

ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ ಶಾಮನೂರು ಪ್ರಮಾಣವಚನ ಸ್ವೀಕಾರ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು ಇಂದು ಅಧಿಕೃತವಾಗಿ ಶಾಸಕರಾಗಿ ಪದಗ್ರಹಣ…

BIG NEWS : ಬರಡು ಭೂಮಿಗೆ ಗಂಗೆ ಹರಿಸಿದ ‘ಗೃಹಲಕ್ಷ್ಮಿ’ : ಹೊಲದಲ್ಲಿ ಬೋರ್ವೆಲ್ ಕೊರೆಸಿ ಇತರರಿಗೆ ಮಾದರಿಯಾದ ಮಹಿಳೆ!

ಒತ್ತುವರಿಯಾದ ನಿಮ್ಮ ಜಮೀನು ಕಾನೂನು ಪ್ರಕಾರ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

BREAKING : ಸಚಿವ ಸಂಪುಟ ಪುನಾರಚನೆ ಮಾಡ್ಬೇಕು, ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ : ಸುಳಿವು ನೀಡಿದ ಸಿಎಂ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.