ತಿರುಪತಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಇಂದು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಪತ್ನಿ ರಾಧಿಕಾ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಖೇಶ್ ಅಂಬಾನಿ ಅವರು ತಿರುಮಲ ಶ್ರೀಗಳಿಗೆ ರೂ.1.5 ಕೋಟಿ ದೇಣಿಗೆಯನ್ನು ನೀಡಿದರು.
Reliance Industries chairman Mukesh Ambani visited and offered prayers at Tirupati Temple in Andhra Pradesh, today pic.twitter.com/VHUKcn1i63
— ANI (@ANI) September 16, 2022
ಶುಕ್ರವಾರ ಬೆಳಗ್ಗೆ ನಡೆದ ಅಭಿಷೇಕ ಹಾಗೂ ನಿಜಪಾದ ದರ್ಶನ ಸೇವೆಯಲ್ಲಿ ಅಂಬಾನಿ ಕುಟುಂಬ ಸಮೇತ ಪಾಲ್ಗೊಂಡಿದ್ದರು. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಾರ್ಯ ನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಅವರು ಅಂಬಾನಿ ಅವರನ್ನು ಸ್ವಾಗತಿಸಿ,ದರ್ಶನದ ವ್ಯವಸ್ಥೆ ಮಾಡಿದರು.
ದರ್ಶನದ ನಂತರ ರಂಗನಾಯಕ ಮಂಟಪದಲ್ಲಿ ವಿದ್ವಾಂಸರಿಂದ ವೇದಾಶೀರ್ವಾದ ನಡೆಯಿತು. ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿ ತಿರುಮಲಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ತಿರುಮಲದಲ್ಲಿರುವ ದೇವಾಲಯವು ಪ್ರತಿವರ್ಷ ಅಭಿವೃದ್ಧಿ ಹೊಂದುತ್ತಿದೆ ಮತ್ತು ಸುಧಾರಿಸುತ್ತಿದೆ ಎಂದು ಅವರು ಹೇಳಿದರು.