ಬೆಂಗಳೂರು: ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ( MP Tejasvi Surya ) ಅವರು ಇಂದು ಸಂಪಂಗಿರಾಮನಗರದ ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆಯ ಸಿಟಿ ಸ್ಕ್ಯಾನ್ ಘಟಕ ವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಸಿಂಧಿ ಯೂತ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ ಸಂಸದರಿಂದ ಉದ್ಘಾಟನೆಗೊಂಡ ನೂತನ ಸಿಟಿ ಸ್ಕ್ಯಾನ್ ಘಟಕವನ್ನು ಅರ್ಜುನ್ ಮೆಂಡ ಹಾಗೂ ಆಶಾ ಮೆಂಡ ಅವರಿಗೆ ಅರ್ಪಿಸಲಾಯಿತು.
BIG NEWS: ಮೈಸೂರಿನ ‘ಬಿಜೆಪಿ ಮುಖಂಡನ ಹನಿಟ್ರ್ಯಾಫ್ ಪ್ರಕರಣ’ಕ್ಕೆ ಬಿಗ್ ಟ್ವಿಸ್ಟ್: ಅಸಲಿಗೆ ನಡೆದಿದ್ದೇನು ಗೊತ್ತಾ.?
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ಕೋವಿಡ್ ಸಂದರ್ಭದಲ್ಲಿ ಸಿಂಧಿ ಆಸ್ಪತ್ರೆಯು, ಅಗತ್ಯವಿರುವವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಆರೋಗ್ಯ ಸೇವೆ, ತೋರಿರುವ ಕಾಳಜಿ ಶ್ಲಾಘನೀಯ. ಈ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಂದುವರಿದ ಭಾಗವಾಗಿ ನಗರದ ಐಟಿಸಿ ಗಾರ್ಡೇನಿಯ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ, ಮಾತನಾಡಿದ ಸಿಂಧಿ ಸಮುದಾಯದ ರಾಜ್ ಮೆಂಡ ಅವರು, ಸಿಂಧಿ ಸಮುದಾಯವು ಶಾಲೆ, ಕಾಲೇಜು ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿದ್ದು, ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆಯು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕೈಗೆಟುಕುವ ಮೊತ್ತದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತ ಬಂದಿದೆ ಎಂದರು.
ಇದೀಗ ಉದ್ಘಾಟನೆಗೊಂಡಿರುವ ಸಿಟಿ ಸ್ಕ್ಯಾನ್ ವಿಭಾಗವೂ ಸಹ ಅತ್ಯಂತ ಕಡಿಮೆ ಮೊತ್ತದಲ್ಲಿ ಸೇವೆ ಒದಗಿಸಲಿದೆ. ನಮ್ಮ ಆಸ್ಪತ್ರೆಯು ಸ್ತ್ರೀ ರೋಗ ವಿಭಾಗ, ಯುರೋಲಜಿ, ಆರ್ಥೋಪೆಡಿಕ್ಸ್ ಸೇರಿದಂತೆ ಹತ್ತಾರು ವಿಭಾಗಗಳನ್ನು ಒಳಗೊಂಡಿದ್ದು, ಅನೇಕ ತಜ್ಞ ವೈದ್ಯರು ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ನಮ್ಮ ಕರೆಗೆ ಒಪ್ಪಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆ ಬಗ್ಗೆ
100 ಹಾಸಿಗೆಗಳ ವ್ಯವಸ್ಥೆ ಹಾಗೂ 11 ಐಸಿಯು ಘಟಕಗಳನ್ನು ಹೊಂದಿರುವ ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆಯಲ್ಲಿ ಇದೀಗ ಸಿಟಿ ಸ್ಕ್ಯಾನ್ ವಿಭಾಗವನ್ನು ಅಳವಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರು ಹಾಗೂ ಅಗತ್ಯವಿರುವವರಿಗೆ ಕೈಗೆಟಕುವ ಮೊತ್ತದಲ್ಲಿ ಅತ್ಯಂತ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ.
BREAKING NEWS: ಇಂದು ನಡೆಯಬೇಕಿದ್ದಂತ ರಾಜ್ಯ ಸಚಿವ ಸಂಪುಟ ಸಭೆ ಮುಂದೂಡಿಕೆ