ಬೆಂಗಳೂರು: ನಮ್ಮ ಗಾಡಿಗೆ ಗುದ್ದಿದ್ದೀರಿ. ಆಕ್ಸಿಡೆಂಟ್ ( Accident ) ಮಾಡಿದ್ದೀರಿ ಎಂಬುದಾಗಿ ಒಂಟಿಯಾಗಿ ಸಾಗುವಂತೆ ವಾಹನ ಸವಾರರನ್ನು ( Motorist ) ಟಾರ್ಗೆಟ್ ಮಾಡಿ, ದರೋಡೆ ಮಾಡುತ್ತಿದ್ದಂತ ಇಬ್ಬರು ಆರೋಪಿಗಳನ್ನು ಪೊಲೀಸರು ( Karnataka Police ) ಬಂಧಿಸಿದ್ದಾರೆ. ಅಂದಹಾಗೇ ಇವರು ಆಕ್ಸಿಡೆಂಟ್ ತರ ವಾಹನಕ್ಕೆ ತಾವೇ ಟಚ್ ಮಾಡಿ, ಸವಾರರನ್ನು ಸುಲಿಗೆ ಮಾಡುತ್ತಿದ್ದರಂತೆ.
BREAKING NEWS: KSOU ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ್ ಹಲ್ಲೆ ನೇಮಕ
ಬೆಂಗಳೂರಿನ ಲಾಲ್ ಬಾಗ್, ಹೊಸೂರು ರಸ್ತೆಯಲ್ಲಿ ಒಂಟಿಯಾಗಿ ತೆರಳುತ್ತಿದ್ದಂತ ವಾಹನ ಸವಾರರ ಗಾಡಿಗಳಿಗೆ ತಾವೇ ತಾವಾಗಿ ಡಿಕ್ಕಿ ಹೊಡೆಸಿ, ಆಕ್ಸಿಡೆಂಟ್ ಮಾಡಿದ್ದೀರಿ ಎಂಬುದಾಗಿ ಗಲಾಟೆ ಮಾಡಿ, ದರೋಡೆ ಮಾಡುತ್ತಿದ್ದ ಬಗ್ಗೆ ಸಿದ್ಧಾಪುರ ಠಾಣೆಗೆ ( Bengaluru Siddapura Police Station ) ದೂರು ಬಂದಿತ್ತು. ಈ ದೂರನ್ನು ಆಧರಿಸಿ ಆರೋಪಿಗಳ ಪತ್ತೆಗೆ ಇಳಿದಂತ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
BIG BREAKING NEWS: ರಾಜ್ಯದ ನೂತನ ವಿವಿಗೆ ಕುಲಪತಿ ನೇಮಕಕ್ಕೆ ಶೋಧನ ಸಮಿತಿ ರಚಿಸಿ ಸರ್ಕಾರ ಆದೇಶ
ಬಂಧಿತ ಆರೋಪಿಗಳನ್ನು ಜಮೀಲ್ ಖಾನ್ ಹಾಗೂ ಮತ್ತೋರ್ವ ಬಾಲಕ ಎಂದು ತಿಳಿದು ಬಂದಿದೆ. ಈ ಇಬ್ಬರು ಸೇರಿಕೊಂಡು ಒಂಟಿಯಾಗಿ ಸಂಚರಿಸುತ್ತಿದ್ದಂತ ವಾಹನ ಸಾವರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರಂತೆ. ಬಂಧಿತ ಆರೋಪಿಗಳಿಂದ 15 ಸಾವಿರ ನಗದು, ಒಂದು ಬೈಕ್ ವಶ ಪಡಿಸಿಕೊಂಡಿದ್ದಾರೆ. ಸೋ ವಾಹನ ಸಾವರರಾದಂತ ನೀವು ಒಂಟಿಯಾಗಿ ತೆರಳೋ ಮುನ್ನಾ ಎಚ್ಚರಿಕೆ ವಹಿಸಿ. ಹೀಗೆ ನಿಮ್ಮನ್ನು ದರೋಡೆ ಮಾಡಬಹುದು ಹುಷಾರಾಗಿರಿ.
Viral Video: ಕೋಳಿ ಬಿಡ್ರೋ..! ಸೋಷಿಯಲ್ ಮೀಡಿಯಾದಲ್ಲಿ ಈ ವಯ್ಯನ ಬೈಗುಳದ ವೀಡಿಯೋ ಸಖತ್ ವೈರಲ್.!