ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮೂರು ಮಕ್ಕಳ ತಾಯಿಯೊಬ್ಬರು 10 ನೇ ತರಗತಿಯ ದ್ವೈವಾರ್ಷಿಕ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 93 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದು, ಅಚ್ಚರಿ ಮೂಡಿಸಿದ್ದಾರೆ.
ಮಂಗಳವಾರ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಟರ್ಗಾಮ್ ಪ್ರದೇಶದ ಮೂರು ಮಕ್ಕಳ ತಾಯಿಯಾದ ಸಬ್ರಿನಾ ಖಾಲಿಕ್ 500 ರಲ್ಲಿ 467 ಅಂಕ(ಶೇಕಡಾ 93.4)ಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಬ್ರಿನಾ ಖಾಲಿಕ್, ʻ2012ರಲ್ಲಿ 9ನೇ ತರಗತಿ ಉತ್ತೀರ್ಣಳಾದ ಬಳಿಕ ನನಗೆ ಮದುವೆಯಾಯಿತು. ಹೀಗಾಗಿ, ಅಧ್ಯಯನವನ್ನು ತೊರೆಯಬೇಕಾಯಿತು. ನಂತ್ರ, ಮೂವರು ಮಕ್ಕಳಾದ ಮೇಲೆ ಶಿಕ್ಷಣ ಮುಂದುವರಿಸಲು ಸಾಧ್ಯವಾಲಿಲ್ಲ. ಆದರೆ, 10 ವರ್ಷಗಳ ನಂತರ, ಕಳೆದ ವರ್ಷ ನಾನು ಅಧ್ಯಯನ ಮಾಡಲು ಮತ್ತು ಪರೀಕ್ಷೆಗೆ ತೆಗೆದುಕೊಳ್ಳಲು ನಿರ್ಧರಿಸಿದೆʼ ಎಂದಿದ್ದಾರೆ.
ನನ್ನ ಕುಟುಂಬವು ನನಗೆ ಸಾಥ್ ನೀಡಿದೆ. ಆದರೆ, ಮನೆಕೆಲಸಗಳ ನಡುವೆ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಓದುವುದು ಕಷ್ಟಕರವಾಗಿತ್ತು. ಇದೆಲ್ಲದರ ನಡುವೆ ನನ್ನ ಗುರಿ ತಲುಪಲು ನಿರ್ಧರಿಸಿದೆ ಎಂದಿರುವ ಖಾಲಿಕ್ ದ್ವೈವಾರ್ಷಿಕ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ.
Good News : ರೈತ ಸಮುದಾಯಕ್ಕೆ ಸಿಹಿಸುದ್ದಿ : ಅಕ್ಟೋಬರ್ 2 ರಿಂದ `ಯಶಸ್ವಿನಿ ಯೋಜನೆ’ ಮರು ಜಾರಿ
ಆನೆ ಬಂಧನ ಪ್ರಕರಣ: ದೇವಸ್ಥಾನದ ಆನೆ ʻಜೋಯ್ಮಾಳʼವನ್ನು ಅಸ್ಸಾಂಗೆ ಹಿಂದಿರುಗಿಸಲು ನಿರಾಕರಿಸಿದ ತಮಿಳುನಾಡು