ಬೆಂಗಳೂರು: ನಗರದ ಒತ್ತಡದ ಜೀವನದ ನಡುವೆಯೂ ಸಿಲಿಕಾನ್ ಸಿಟಿಯ ಜನರನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಲುಪಿಸೋ ಕೆಲವನ್ನು ಬಿಎಂಟಿಸಿ ಬಸ್ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಆದ್ರೇ ಹೀಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವಂತ ಬಿಎಂಟಿಸಿ ಸಿಬ್ಬಂದಿಗಳಲ್ಲಿಯೇ ( BMTC Employees ) ಬಹುತೇಕರು ಹೃದಯ ಸಮಸ್ಯೆಯಿಂದ ( Heart Problem ) ಬಳಲುತ್ತಿರೋ ಆಘಾತಕಾರಿ ವರದಿಯನ್ನು ಜಯದೇವ ಹೃದ್ರೋಗ ಆಸ್ಪತ್ರೆ ( Jayadeva Heart Hospital ) ಬಿಚ್ಚಿಟ್ಟಿದೆ.
ಜಯದೇವ ಆಸ್ಪತ್ರೆಯ ವರದಿಯ ಪ್ರಕಾರ, ಬಿಎಂಟಿಸಿಯ ಚಾಲಕರು, ನಿರ್ವಾಹಕರು ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಅದರಲ್ಲೂ ಹೈ ಕೊಲೆಸ್ಟ್ರಾಲ್, ಹೈ ಬಿಪಿ, ಹೈಪರ್ ಟೆನ್ಷನ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
BIG BREAKING NEWS: ‘ಮುಲಾಯಂ ಸಿಂಗ್ ಯಾದವ್’ ಆರೋಗ್ಯ ಸ್ಥಿತಿ ಗಂಭೀರ | Mulayam Singh Yadav quite critical
ಇನ್ನೂ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಒಳಪಟ್ಟಂತ ಅನೇಕ ಬಿಎಂಟಿಸಿ ಸಿಬ್ಬಂದಿಗಳಿಗೆ ತಮಗೆ ಹೃದಯದಲ್ಲಿ ಸಮಸ್ಯೆ ಇರುವುದೇ ಗೊತ್ತಿಲ್ಲವಂತೆ. ಇದು ಪರೀಕ್ಷೆ ಮಾಡಿದಂತ ಬಳಿಕವೇ ತಿಳಿದು ಬಂದಿದೆ ಎನ್ನಲಾಗಿದೆ.
ಅಂದಹಾಗೇ ಜಯದೇವ ಆಸ್ಪತ್ರೆಯಲ್ಲಿ ಸುಮಾರು 800 ರಿಂದ 1000 ಬಿಎಂಟಿಸಿ ಸಿಬ್ಬಂದಿಗಳು ಹೃದಯ ಪರೀಕ್ಷೆಗೆ ಒಳಪಟ್ಟಿದ್ದಾರೆ. ಹೀಗೆ ಪರೀಕ್ಷೆ ಮಾಡಿಸಿಕೊಂಡಂತ ಶೇ.50ರಷ್ಟು ಜನರಲ್ಲಿ, ಹೃದಯ ಸಂಬಂಧಿ ಖಾಯಿಲೆ ಇರೋದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದಂತ ಆಸ್ಪತ್ರೆಯ ನಿರ್ದೇಶಕ ಡಾ.ಸಿಎನ್ ಮಂಜುನಾಥ್, ಬಿಎಂಟಿಸಿ ಸಿಬ್ಬಂದಿಗಳ ಈ ಹೃದಯರೋಗ ಸಮಸ್ಯೆಗೆ ಯಾವುದೇ ರೀತಿಯ ವ್ಯಾಯಾಮ ಮಾಡದೇ ಇರೋದು ಒಂದು ಕಾರಣವಾಗಿದೆ. ಅಲ್ಲದೇ ಒತ್ತಡದಿಂದ ಕೂಡಿದ ಕೆಲಸವೂ ಕಾರಣವಿರಬಹುದು. ಹೀಗಾಗಿ ಪ್ರತಿಯೊಬ್ಬರೂ ಹೃದಯ ತಪಾಣೆಗೆ ಒಳಗಾಗುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದಿದ್ದಾರೆ.