ನವದೆಹಲಿ: ನಮ್ಮ ಗೌಪ್ಯತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಲೆಂದೇ ಮೊಬೈಲ್, ಲ್ಯಾಪ್ಗಳಲ್ಲಿ ಸೀಕ್ರೇಟ್ ಪಾಸ್ವರ್ಡ್ಗಳನ್ನು ಇಟ್ಟುಕೊಂಡಿರುತ್ತೇವೆ. ಈ ಪಾಸ್ವರ್ಡ್ಗಳು ನಮಗೆ ಸುಲಭವಾದ ಹಾಗೂ ಬೇಗನೆ ನೆನಪಾಗುವಂತಗ ಅಕ್ಷರ ಸಂಖ್ಯೆಗಳಿಂದ ಕೂಡಿರುತ್ತವೆ. ಆದ್ರೆ, ಇದು ನಮಗೆ ಸುಲಭವೆನಿಸಬಹುದು. ಆದ್ರೆ, ಇದನ್ನು ಆನ್ಲೈನ್ ಖದೀಮರು ಬೇಗ ಕ್ರ್ಯಾಕ್ ಅಥವಾ ಹ್ಯಾಕ್ ಮಾಡಬಲ್ಲರು ಎಂಬುದು ನೆನಪಿರಲಿ.
ಇಂದು ಎಲ್ಲರಿಗೂ ಹ್ಯಾಕರ್ಸ್ಗಳದ್ದೇ ಚಿಂತೆ. ನಾವು ಎಷ್ಟೇ ಜಾಗರೂಕರಾಗಿದ್ರೂ, ಅವರು ನಮ್ಮನ್ನು ಯಾಮಾರಿಸಿ ಸುಲಭವಾಗಿ ಮೋಸಗೊಳಿಸುತ್ತಾರೆ. ನಾವು ಎಟಿಎಂನಿಂದ ಹಣ ಪಡೆಯುವುದರಿಂದ ಹಿಡಿದು ಮೊಬೈಲ್ ಮೂಲಕ ಹಣ ಪಾವತಿಸುವವರೆಗೆ ಜನರು ಪಾಸ್ವರ್ಡ್ ಬಳಸುತ್ತಾರೆ. ಹಾಗಾಗಿ, ಪಾಸ್ವರ್ಡ್ಗೆ ಹೆಚ್ಚು ಮಹತ್ವವಿದೆ.
ನಾರ್ಡ್ ಸೆಕ್ಯುರ್ಟಿಯ ಪಾಸ್ವರ್ಡ್ ಮ್ಯಾನೇಜರ್ ಆರ್ಮ್ ನಾರ್ಡ್ಪಾಸ್ನ ವರದಿಯ ಪ್ರಕಾರ, ಭಾರತದಲ್ಲಿ 2022 ರಲ್ಲಿ ಸಾಮಾನ್ಯವಾಗಿ ಬಳಸುವ ಪಾಸ್ವರ್ಡ್ಗಳ ಪಟ್ಟಿಯ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ “password” ಎಂಬ ಪದವನ್ನೇ 3.4 ಮಿಲಿಯನ್ಗಿಂತಲೂ ಹೆಚ್ಚು ಜನರು ಬಳಸಿದ್ದಾರೆ ಎಂದು ಬಹಿರಂಗವಾಗಿದೆ.
ನಾರ್ಡ್ಪಾಸ್ 30 ದೇಶಗಳಲ್ಲಿ ಸಂಶೋಧನೆ ನಡೆಸಿದೆ. ಈ ವೇಳೆ, ಜನರು ತಮ್ಮ ಪಾಸ್ವರ್ಡ್ಗಳನ್ನು ಆಯ್ಕೆಮಾಡುವಲ್ಲಿ ಸಾಂಸ್ಕೃತಿಕ ಪ್ರಭಾವಗಳನ್ನು ಸಹ ನೋಡಿದ್ದಾರೆ. ಈ ದೇಶಗಳಾದ್ಯಂತ ಬಳಕೆದಾರರು ಬಳಸುವ ಪ್ರಮುಖ ಮೂರು ಪಾಸ್ವರ್ಡ್ಗಳೆಂದರೆ-‘password’, ‘123456’ ಮತ್ತು ‘123456789’ ಎಂಬುದಾಗಿ ತಿಳಿದುಬಂದಿದೆ. ಈ ಎಲ್ಲಾ ಪ್ರಮುಖ ಮೂರು ಪಾಸ್ವರ್ಡ್ಗಳು ಬಲು ದುರ್ಬಲವಾಗಿದ್ದು, ಕೇವಲ ಒಂದೇ ನಿಮಿಷದಲ್ಲಿ ಹ್ಯಾಕ್ ಮಾಡಬಹುದಾಗಿದೆ ಎಂದು ಸಂಶೋಧನೆಯು ತೋರಿಸುತ್ತದೆ.
ಈ ಪಾಸ್ವರ್ಡ್ಗಳ ನಂತ್ರ, ಭಾರತದಲ್ಲಿ ಹೆಚ್ಚು ಬಳಸಲಾಗಿರುವ ಪಾಸ್ವರ್ಡ್ಗಳೆಂದರೆ, “ಬಿಗ್ಬಾಸ್ಕೆಟ್” ಮತ್ತು “1111111” ಆಗಿದೆ. ಇವುಗಳ ನಂತ್ರ, ‘iloveyou’, ‘abcd1234’ ಮತ್ತು ‘iphone5s’ ಸಾಮಾನ್ಯ ಪಾಸ್ವರ್ಡ್ಗಳಾಗಿವೆ.
ಬಳಕೆದಾರರು ತಮ್ಮ ಖಾತೆಗಳಿಗೆ ಪಾಸ್ವರ್ಡ್ ರಚಿಸುವಲ್ಲಿ ಚಲನಚಿತ್ರಗಳು ಮತ್ತು ಚಲನಚಿತ್ರಗಳ ದೊಡ್ಡ ಪ್ರಭಾವವನ್ನು ಹೊಂದಿರುತ್ತಾರೆ ಎಂದು ವರದಿಯು ಗಮನಿಸಿದೆ. ಜನರು ಸಾಮಾನ್ಯವಾಗಿ ತಮ್ಮ ನೆಚ್ಚಿನ ಕ್ರೀಡಾ ತಂಡಗಳು, ಚಲನಚಿತ್ರ ಪಾತ್ರಗಳು ಮತ್ತು ಆಹಾರ ಪದಾರ್ಥಗಳಿಂದ ಪಾಸ್ವರ್ಡ್ಗಳನ್ನು ಬಳಸುತ್ತಾರೆ ಎಂದು ಸಂಶೋಧಕರು ಗಮನಿಸಿದ್ದಾರೆ. ಫ್ಯಾಶನ್ ಬ್ರ್ಯಾಂಡ್ಗಳು, ಪ್ರಮಾಣ ಪದಗಳು, ಕಲಾವಿದರ ಹೆಸರುಗಳು, ವಿಡಿಯೋ ಆಟಗಳು, ಕಾರುಗಳು ಮತ್ತು ಆಹಾರ ಪದಗಳು ಸೇರಿವೆ.
3TB ಡೇಟಾಬೇಸ್ ಅನ್ನು ಮೌಲ್ಯಮಾಪನ ಮಾಡುವ ಮೂಲಕ ಸೈಬರ್ ಸುರಕ್ಷತೆ ಘಟನೆಗಳ ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಸ್ವತಂತ್ರ ಸಂಶೋಧಕರ ಸಹಭಾಗಿತ್ವದಲ್ಲಿ ನಾರ್ಡ್ಪಾಸ್ ಪಟ್ಟಿಯನ್ನು ಸಂಗ್ರಹಿಸಿದೆ. ವರದಿಯ ಪ್ರಕಾರ, ಇಂದಿಗೂ ಜನರು ಬಲು ದುರ್ಬಲ ಎನ್ನಬಹುದಾದ ಪಾಸ್ವರ್ಡ್ ಗಳನ್ನು ಬಳಸುತ್ತಿದ್ದಾರೆ ಎಂದು ಸರಳವಾಗಿ ತಿಳಿದುಬರುತ್ತದೆ.
ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಕಾಂಗ್ರೆಸ್ನಿಂದ ಗಂಭೀರ ಆರೋಪ
ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಕಾಂಗ್ರೆಸ್ನಿಂದ ಗಂಭೀರ ಆರೋಪ