ಕೆಎನ್ಎನ್ಸಿನಿಮಾಡೆಸ್ಕ್: ದೇಶಾದ್ಯಂತ ಬನಾರಸ್ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಝೈದ್ ಖಾನ್ ಹತ್ತು ಹಲವು ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿಕೊಟ್ಟ ಬನಾರಸ್ ನಿರೀಕ್ಷೆಗೂ ಮೀರಿ ಗೆಲುವನ್ನು ದಾಖಲಿಸುತ್ತಿದೆ. ಈ ಗೆಲುವಿನ ಖುಷಿಯಲ್ಲಿ ಚಿತ್ರತಂಡವಿದೆ. ಸದ್ಯ ಬನಾರಸ್ ಕೆಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇದು ಒಂದು ಖುಷಿಯ ವಿಚಾರವಾದರೆ, ಮತ್ತೊಂದು ಖುಷಿ ಕೂಡ ಸೇರ್ಪಡೆಯಾಗಿದೆ. ಅದು ಬೆಳಕಿನ ಕವಿತೆ.. ಬೆರಗಿಗೆ ಸೋತೆ ಹಾಡಿನ ವಿಚಾರ. ಹೇಳಿ ಕೇಳಿ ಹಾಡು ಮೈಮನಸ್ಸನ್ನು ತಣಿಸುವಂತದ್ದು, ಸಂಗೀತ ಪ್ರೇಮಿಗಳ ಹೃದಯ ಮುಟ್ಟುವಂತದ್ದು, ಸದಾ ಕೇಳಬೇಕೆನಿಸುವಂತದ್ದು. ಹೀಗಾಗಿ ಈ ಹಾಡಿನ ಸಕ್ಸಸ್ ಎಷ್ಟರಮಟ್ಟಿಗೆ ರೀಚ್ ಆಗಿದೆ ಎಂದರೆ ಮಿಲಿಯನ್ ಗಟ್ಟಲೆ ಮನಸ್ಸುಗಳನ್ನು ಕದ್ದು ಬಿಟ್ಟಿದೆ.
ಆಲ್ಮೋಸ್ಟ್ ವಾಟ್ಸಾಪ್ ಸ್ಟೇಟಸ್, ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲೂ ಬೆಳಕಿನ ಕವಿತೆಗೆ ತಮ್ಮ ವಿಡಿಯೋ ಮ್ಯಾಚ್ ಮಾಡುತ್ತಿದ್ದಾರೆ. ಮೋಹಕ ನೋಟವೊಂದನ್ನು ಬೀರುವ ಹುಡುಗಿಯರು ಬೆಳಕಿನ ಕವಿತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಹುಡುಗರ ಹೃದಯ ಬೆರಗಿಗೆ ಸೋಲುತ್ತಿದೆ. ಹಾಡು ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ.
ಸಿನಿಮಾ ರಿಲೀಸ್ ಗೂ ಮುನ್ನವೇ ಬೆಳಕಿನ ಕವಿತೆ ಹಾಡು ಕೂಡ ರಿಲೀಸ್ ಆಗಿತ್ತು. ಸಿನಿಮಾ ರಿಲೀಸ್ ಆದ್ಮೇಲಂತು ಹಾಡು ಸಿಕ್ಕಾಪಟ್ಟೆ ವೀವ್ಸ್ ಕಂಡಿದೆ. ಈ ಮನಮೋಹಕ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದರೆ, ಎ ಹರ್ಷ ಕೊರಿಯೋಗ್ರಫಿ ಮಾಡಿದ್ದಾರೆ. ಅರುಣ್ ಸಾಗರ್ ಹಾಕಿದ್ದ ಸುಂದರ ಸೆಟ್ ನಲ್ಲಿ ಝೈದ್ ಮತ್ತು ಸೋನಲ್ ರೋಮ್ಯಾನ್ಸ್ ಸಖತ್ತಾಗಿ ವರ್ಕೌಟ್ ಆಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲೂ ಹಾಡಿನ ಗಮ್ಮತ್ತು ಕಿಕ್ ಏರಿಸುತ್ತಿದೆ. ಏಳು ಮಿಲಿಯನ್ ವೀಕ್ಷಣೆ ಪಡೆದಿದೆ. ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಎಲ್ಲಾ ಕಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಝೈದ್ ಖನ್ ನಟನೆಗೂ ಭೇಷ್ ಡನ್ನುತ್ತಿದ್ದಾರೆ.