ಗುಜರಾತ್: ಇಲ್ಲಿನ ಮೊರ್ಬಿ ಕೇಬಲ್ ಸೇತುವೆ ಮುರಿದು ಬಿದ್ದು ಇಂದು ಭೀಕರ ದುರಂತವೊಂದು ( Gujarat’s Morbi cable bridge collapse ) ಸಂಭವಿಸಿದೆ. ಸೇತುವೆಯ ಮೇಲೆ ಸಾಗುತ್ತಿದ್ದಂತ 60 ಕ್ಕೂ ಹೆಚ್ಚು ಮಂದಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ರಾಜ್ಕೋಟ್ ನ ಬಿಜೆಪಿ ಸಂಸದ ಮೋಹನ್ಭಾಯ್ ಕಲ್ಯಾಣ್ಜಿ ಕುಂದಾರಿಯಾ ( BJP Rajkot MP Mohanbhai Kalyanji Kundariya ) ಅವರು, ಈ ದುರಂತದಲ್ಲಿ 60 ಕ್ಕೂ ಹೆಚ್ಚು ಶವಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ. ಅದರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರು. ಉಳಿದವರನ್ನು ರಕ್ಷಿಸಲಾಗಿದೆ. ಎನ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇದು ತುಂಬಾ ದುಃಖಕರವಾಗಿದೆ ಎಂದು ಹೇಳಿದ್ದಾರೆ.
Gujarat's Morbi cable bridge collapse | More than 60 bodies recovered, of which more are of children, women & elderly. Rest have been rescued; NDRF rescue op underway. We're taking this matter very seriously, it's very saddening: Mohanbhai Kalyanji Kundariya, BJP MP from Rajkot pic.twitter.com/SjIGxRsya5
— ANI (@ANI) October 30, 2022
ಅಂದಹಾಗೇ, ಗುಜರಾತ್ನ ಮೊರ್ಬಿ ಕೇಬಲ್ ಸೇತುವೆ ಮುರಿದು ಬಿದ್ದ ದುರಂತದ ( Morbi cable bridge collapse ) ಕುರಿತಂತೆ ಪ್ರತ್ಯಕ್ಷ ದರ್ಶಿ ಅಮಿತ್ ಪಟೇಲ್ ಹಾಗೂ ಸುಕ್ರಂ ಎಂಬುವರು ಮಾತನಾಡಿ, ದೀಪಾವಳಿ ರಜಾದಿನಗಳು ಮತ್ತು ವಾರಾಂತ್ಯದ ದೃಷ್ಟಿಯಿಂದ ಅನೇಕ ಜನರು ಇಲ್ಲಿಗೆ ಬಂದರು. ಇದು ಪ್ರವಾಸಿ ಸ್ನೇಹಿ ಸ್ಥಳವಾಗಿದೆ. ಸೇತುವೆಯಲ್ಲಿ ಭಾರಿ ಜನಸಂದಣಿಯಿಂದಾಗಿ ಈ ಘಟನೆ ಸಂಭವಿಸಿರಬಹುದು. ಅದು ಕುಸಿದಾಗ, ಜನರು ಪರಸ್ಪರರ ಮೇಲೆ ಬಿದ್ದರು ಎಂದು ಹೇಳಿದ್ದಾರೆ.
Gujarat's Morbi cable bridge collapse | Many people came here in view of Diwali holidays & weekend; it's a tourist-friendly place. Incident occurred probably because of the huge crowd at bridge. When it collapsed, people fell over each other, say eyewitnesses Amit Patel & Sukram pic.twitter.com/BMbpAPHaA2
— ANI (@ANI) October 30, 2022