ನವದೆಹಲಿ : ಆಫ್ರಿಕಾದಲ್ಲಿ ಮಂಕಿಪಾಕ್ಸ್ಗೆ ನಾಲ್ಕು ಸಾವುಗಳು ಸಂಭವಿಸಿವೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವು ಹೆಚ್ಚು ಸಾವು-ನೋವುಗಳಗೆ ಕಾರಣವಾಗಬಹುದು ಎಂದು ಹೇಳಿದೆ.
OMG: ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ʻ100ಕ್ಕೆ 151 ಅಂಕʼ ಗಳಿಸಿ ಅಚ್ಚರಿ ಮೂಡಿಸಿದ ವಿದ್ಯಾರ್ಥಿ!.. ಹೇಗೆ ಗೊತ್ತಾ?
ಮಂಕಿಪಾಕ್ಸ್ನ ನಿರಂತರ ಹರಡುವಿಕೆಯು ಹೆಚ್ಚಿನ ಸಾವುಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ತ್ವರಿತವಾಗಿ ವೈರಸ್ನ ಪ್ರಸರಣವನ್ನು ತಡೆಯುವುದು ಮತ್ತು ಏಕಾಏಕಿ ಹರಡುತ್ತಿರುವ ವೈರಸ್ ಅನ್ನು ನಿಯಂತ್ರಿಸುವುದು ನಮ್ಮ ಗುರಿಯಾಗಿದೆ ಎಂದು ಡಬ್ಲ್ಯುಒಇ ಯುರೋಪಿನ ಹಿರಿಯ ತುರ್ತು ಅಧಿಕಾರಿ ಕ್ಯಾಥರೀನ್ ಸ್ಮಾಲ್ವುಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ ಈ ರೋಗವು ಚಿಕಿತ್ಸೆಯ ಅಗತ್ಯವಿಲ್ಲದೆ ವ್ಯಕ್ತಿಯೂ ಗುಣಮುಖವಾಗುತ್ತಾನೆ ಎಂದು ಸ್ಮಾಲ್ವುಡ್ ಒತ್ತಿ ಹೇಳಿದ್ದಾರೆ.
BIGG NEWS : 2024ರ ಚುನಾವಣೆಯಲ್ಲೂ ‘ಮೋದಿ’ಯೇ ಪ್ರಧಾನಿ ಅಭ್ಯರ್ಥಿ ; ಅಮಿತ್ ಶಾ ಘೋಷಣೆ
ಜುಲೈ 28 ರಂದು ಮೇ ತಿಂಗಳಲ್ಲಿ ಮೊದಲ ಬಾರಿಗೆ ವರದಿಯಾಗಿದೆ. ಇದುವರಗೆ 78 ದೇಶಗಳೂ ಸುಮಾರು 18,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳನ್ನು ಹೊಂದಿವೆ. ಐದು ಮಾಂಕೈಪಾಕ್ಸ್ ಸಂಬಂಧಿತ ಸಾವುಗಳು ಆಫ್ರಿಕಾದಿಂದ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕಳೆದ ವಾರ, ಸ್ಪೇನ್ನಿಂದ ಎರಡು ಸಾವುಗಳು ಮತ್ತು ಬ್ರೆಜಿಲ್ ಮತ್ತು ಭಾರತದಿಂದ ತಲಾ ಒಂದು ಸಾವುಗಳು ವರದಿಯಾಗಿವೆ. ಭಾರತವು ಇಲ್ಲಿಯವರೆಗೆ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ ಮೂರು ಕೇರಳದಲ್ಲಿ ಮತ್ತು ದೆಹಲಿಯಲ್ಲಿ ಒಂದು ಕೇಸ್ ಇದೆ.
BIGG NEWS: ಮಂಕಿಪಾಕ್ಸ್ ಗೂ ಮತ್ತೆ ಚಿಕನ್ ಪಾಕ್ಸ್ ಗೂ ವ್ಯತ್ಯಾಸವೇನು? ಬಗ್ಗೆ ವೈದ್ಯರ ಹೇಳೋದೇನು ಗೊತ್ತಾ?
ಇತ್ತ ಕೇರಳದಿಂದ ಮೊದಲ ಬಾರಿಗೆ ಪ್ರಕರಣವನ್ನು ಹೊಂದಿರುವ ರೋಗಿಯನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.