ಬೆಂಗಳೂರು : ಬಾದಾಮಿಯ ಕೆರೂರು ಗುಂಪು ಘರ್ಷಣೆ ವಿಚಾರವಾಗಿ ಮಹಿಳೆ ಆಕ್ರೋಶದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ” ಘಟನೆಗೆ ಪರಿಹಾರವಾಗಿ ಹಣ ನೀಡಿದಲ್ಲ, ಮಾನವೀಯತೆ ದೃಷ್ಠಿಯಿಂದ ನೀಡಿದ್ದು”ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಕೆಲ ಜನರಿಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿಜುಲೈ 15 ರಂದು, ಇಂದು ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರ ನೀಡುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಮಹಿಳೆಯೊಬ್ಬರಿಗೆ 2 ಲಕ್ಷ ನೀಡಿ ಸಂದರ್ಭದಲ್ಲಿ ನನಗೆ ಹಣಬೇಡ ನನಗೆ ಶಾಂತಿ, ನಮಗೆ ನ್ಯಾಯ ಕೊಡಿ ಎಂದು ಸಿದ್ದರಾಮಯ್ಯ ಅವರು ನೀಡಿದ ಹಣವನ್ನು ಏಕಾಏಕಿ ಕಾರಿನ ಮೇಲೆ ಎಸೆದು ಹೈಡ್ರಾಮವನ್ನೇ ಸೃಷ್ಟಿಸಿದ್ದರು.
ಈ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿ ಆ ಮಹಿಳೆಯನ್ನು ಯಾರೋ ಎತ್ತಿ ಕಟ್ಟಿದ್ದಾರೆ ʼ ದುಡ್ಡು ಬಿಸಾಡಿದ ಮಹಿಳೆಗೆ ಮತ್ತೆ ಹಣ ಕೊಡಲಾಗಿದೆ. ನಾನು ಘಟನೆಗೆ ಪರಿಹಾರವಾಗಿ ಹಣ ನೀಡಿದಲ್ಲ. ಮಾನವೀಯ (ಕಷ್ಟದಲ್ಲಿರುವವರು ) ದೃಷ್ಠಿಯಿಂದ ನೀಡಿದ ಹಣ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.