ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೇ ಕಾಂಗ್ರೆಸ್ ಕೊಟ್ಟಿದ್ದರೇ ಬಿಜೆಪಿಗರು ಇದು ತುಷ್ಠೀಕರಣ ರಾಜಕಾರಣ ಹಾಗೆ ಹೀಗೆ ಅಂತ ಹೇಳ್ತಿದ್ದರು. ಬಿಜೆಪಿಗರೇ ಇದು ಓಲೈಕೆ ಅಲ್ಲವೇ? ಬೇರೆ ಏನಾದರೂ ಹೆಸರಿದ್ಯಾ ಅಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮೋದಿ ಜಿ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ ರಾಜಕಾರಣವೆಂದು ಹೀಗೆಳೆಯುವ ಬಿ.ಜೆ.ಪಿ ಅವರನ್ನು ಕೇಳುತ್ತಿದ್ದೇವೆ, ಇದು ಓಲೈಕೆ ಅಲ್ಲವೇ ?? ಇದಕ್ಕೆ ಬೇರೆ ಏನಾದರೂ ಹೆಸರಿದೆಯೇ?? ಎಂದು ಕೇಳಿದ್ದಾರೆ.
ದೇಶದ್ಯಾಂತ ಉಗಾದಿ ಹಬ್ಬವನ್ನು ರಂಜಾನ್ ಗೆ ಒಂದು ದಿನ ಮೊದಲೇ ನಬ ವರ್ಷ ,ಬಿಹು, ವೈಶಾಖಿ, ಪನ ಸಂಕ್ರಾಂತಿ, ಗುಡಿ ಪಡವಾ, ಬೈಶಾಕ ಎಂಬ ಹೆಸರುಗಳಿಂದ ಹಬ್ಬವನ್ನು ಆಚರಿಸುತ್ತಿರುವ ಹಿಂದೂಗಳ ಬಗ್ಗೆ ಮೋದಿ ಜೀ ಅವರಿಗೆ ಪ್ರೇಮ ಬರಲಿಲ್ವಾ? ಕಾಂಗ್ರೆಸ್ ನವರು ಮಾಡಿದರೆ ಒಂದು ವ್ಯಾಖ್ಯಾನ ,ಮೋದಿ ಜೀ ಅವರು ಮಾಡಿದರೆ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ವ್ಯಾಖ್ಯಾನವೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ ಮೋದಿ” ಅಭಿಯಾನದ ಮೂಲಕ ಈದ್ ಗೆ ವಿತರಿಸುತ್ತಿರುವ ಕಿಟ್ ಗಳು ,ಹಿಂದೂ ಹಬ್ಬಕ್ಕೆ ಹಿಂದೂಗಳಿಗೆ ವಿತರಿಸಲು ಸಾಧ್ಯವಾಗದಿರುವುದಕ್ಕೆ? ಬಿ.ಜೆ.ಪಿ ಅವರ ಬಳಿ ಉತ್ತರವಿದೆಯೇ ಎಂದಿದ್ದಾರೆ.
ಪ್ರಧಾನಿ @narendramodi ಜೀ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ… pic.twitter.com/TzVvad7PmL
— Ramalinga Reddy (@RLR_BTM) March 27, 2025
ಹಾಲಿನ ದರ ಹೆಚ್ಚಳ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬರೆ: ಸಂಸದ ಬಸವರಾಜ ಬೊಮ್ಮಾಯಿ
ನಾಳೆ ‘ಮಾಜಿ ಶಾಸಕ ಐವಾನ್ ನಿಗ್ಲಿ’ ನಿರ್ಮಾಣದ ‘ಸೆಪ್ಟೆಂಬರ್ 13’ ಚಿತ್ರ ತೆರೆಗೆ