ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದು, ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ನಿವಾಸದ ರಸ್ತೆಯಲ್ಲಿ ಕೂಡ ಗುಂಡಿಗಳಿವೆ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಮೋದಿ, ಟ್ರಂಪ್ ಏನು ಮಾಡ್ತಾರೆ ಅಂತ ನೋಡಲು ಅಧಿಕಾರ ನೀಡಿಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಸಾವಿರ ಗುಂಡಿ ಮುಚ್ಚಿದರೆ ಮರುದಿನ 1 ಸಾವಿರ ಗುಂಡಿಗಳು ಓಪನ್ ಆಗುತ್ತವೆ. ಗುಂಡಿ ವಿಚಾರದಲ್ಲಿ ಸರ್ಕಾರದ ನಡೆ ಕಳ್ಳ ಪೋಲಿಸ್ ಆಟದಂತಿದೆ. ಗುಂಡಿ ಮುಚ್ಚುವುದು ತಾತ್ಕಾಲಿಕ ಅಷ್ಟೇ ಶಾಶ್ವತ ಅಲ್ಲ. ಇಡೀ ಕಾಂಗ್ರೆಸ್ ಸರ್ಕಾರ ಗುಂಡಿಗಳಲ್ಲಿ ಮುಳುಗಿದೆ. ರಾಜ್ಯದಲ್ಲಿರುವ ರಸ್ತೆ ಗುಂಡಿಗಳು ಮರಣದ ಕೂಪಗಳಾಗಿವೆ. ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು.
5000 ಕೋಟಿ ಹಣ ಸರಿಯಾಗಿ ಡಾಂಬರಿಕರಣ ಮಾಡಿದ್ದರೆ ಗುಂಡಿ ಯಾಕೆ ಬೀಳುತ್ತಿತ್ತು? ನೀವು ಕಳಪೆ ಕಾಮಗಾರಿ ಮಾಡಿದ್ದೀರಿ ಅದಕ್ಕೆ ಗುಂಡಿ ಬಿದ್ದಿದೆ ಬೆಂಗಳೂರಿನ ಎಲ್ಲ ರಸ್ತೆಗಳಿಗೆ ಇಂದಿನಿಂದಲೇ ಡಾಂಬರೀಕರಣ ಮಾಡಿ. ರಾಜ್ಯ ಸರ್ಕಾರ ಪಾಪರ್ ಆಗಿದೆ. ಸರ್ಕಾರದ ಬಳಿ ಹಣ ಇಲ್ಲ ರಸ್ತೆ ಗುಂಡಿಗಳನ್ನು ನಾವೇ ಮುಚ್ಚೋಣ. ಜನ ಇದಕ್ಕೆ ಸಹಕಾರ ನೀಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಡಿಸಿಎಂ ಡಿಕೆ ಶಿವಕುಮಾರ್ ಕೆ ತಿರುಗೇಟು ನೀಡಿದರು.
ಡಿಕೆ ಶಿವಕುಮಾರ್ ಅವರೇ ಬ್ಯಾಟರಿ ತೆಗೆದುಕೊಂಡು ಫ್ಲೈಟ್ ಹತ್ತಿ ಅಮೆರಿಕಕ್ಕೆ ಹೋಗಿ ಟ್ರಂಪ್ ನಿವಾಸದ ಮುಂದೆ ಗುಂಡಿ ಇದೆಯಾ ನೋಡಿ. ಮೊದಲು ನಿಮ್ಮ ಮನೆಯ ನೋಡಿಕೊಳ್ಳಿ . ಮೋದಿ ಟ್ರಂಪ್ ಏನು ಮಾಡ್ತಾರೆ ಅಂತ ನೋಡಲು ಅಧಿಕಾರ ನೀಡಿಲ್ಲ. ನಿಮ್ಮ ಬಳಿ ಹಣ ಇಲ್ಲ ಅಂತಾದರೆ ಅದನ್ನು ಓಪನ್ ಆಗಿ ಹೇಳಿಬಿಡಿ. ಮುಚ್ಚಿದ ಗುಂಡಿ ಲೆಕ್ಕ ಕೇಳುತ್ತಿರಿ ತೆರೆದಿರುವ ಗುಂಡಿಗಳ ಬಗ್ಗೆ ಹೇಳಿ. ಎಂದು ಕಾಂಗ್ರೆಸ್ ನಾಯಕರು ವಿರುದ್ಧ ಆರ್ ಅಶೋಕ ವಾಗ್ದಾಳಿ ನಡೆಸಿದರು.