ನವದೆಹಲಿ : ಕರ್ನಾಟಕ ರಾಜ್ಯದ ಹಾಗೂ ಕೇಂದ್ರದಲ್ಲಿ ವಿತ್ತ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವ ನಿರ್ಮಲ ಸೀತಾರಾಮನ್ ಅವರು, ಇಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಇದಕ್ಕೂ ಮೊದಲು ಇಂದು ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ( PM Modi Oath Ceremony ) ಸ್ವೀಕರಿಸಿದರು. ಸತತ ಮೂರನೇ ಬಾರಿಗೆ ಪ್ರಧಾನಿಯಾದ ಹೆಗ್ಗಳಿಕೆಗೆ ನೆಹರು ನಂತ್ರ, ನರೇಂದ್ರ ಮೋದಿ ( Narendra Modi ) ಗಳಿದ್ದಾರೆ. ಇದು 1962 ರಲ್ಲಿ ಜವಾಹರಲಾಲ್ ನೆಹರು ಮಾತ್ರ ಸಾಧಿಸಿದ ಸಾಧನೆಯಾಗಿದೆ.
ಇದಕ್ಕೂ ಮೊದಲು ಜೆಪಿ ನಡ್ದಾ, ಅಮಿತ್ ಶಾ, ರಾಜನಾಥ ಸಿಂಗ್, ಅವರಿಗೆ ರಾಷ್ಟ್ರಪತಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ರಾಜ್ಯದ ನೂತನ ಸಂಸದರಾಗಿರುವ ಎಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಪ್ರಭಾಕರಂದರಾಜೆ ಅವರಿಗೂ ಕೂಡ ರಾಷ್ಟ್ರಪತಿಯವರು ಪ್ರತಿಜ್ಞಾವಿಧಿ ಬೋಧಿಸಿದರು.